ಹೊಸದಿಲ್ಲಿ: ಬಿಜೆಪಿ ಸದಾ ರೈತರ ಒಳಿತನ್ನೇ ಹಾರೈಸುವ ಪಕ್ಷ ಮತ್ತು ರೈತ
ರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಪಕ್ಷ. ತಾನು ಹಾಗೂ ತನ್ನ ಪಕ್ಷ ಸದಾ ರೈತರ ಬೆಂಬಲಕ್ಕಿದ್ದೇವೆಂದು ಸಂಸದ ,ನಟ ಸನ್ನಿ ಡಿಯೋಲ್ ವಿಶದಪಡಿಸಿದ್ದಾರೆ.
ರೈತರ ಪ್ರತಿಭಟನೆ ರೈತರು ಮತ್ತು ಸರಕಾರಕ್ಕೆ ಸಂಬಂತ ವಿಚಾರ. ರೈತರು ತಮ್ಮ ಸಮಸ್ಯೆಗಳನ್ನು ಸರಕಾರದೊಂದಿಗೆ ಚರ್ಚಿಸಿ ಬಗೆಹರಿಸುವರು. ಈ ವಿಷಯದಲ್ಲಿ ಇತರರು ಮೂಗು ತೂರಿಸುವುದು ಅನಗತ್ಯ. ಪ್ರತಿಭಟನೆಯ ದುರ್ಲಾಭ ಪಡೆಯುವ ಸಂಚುಳ್ಳ ಕೆಲವರು ಬೇಕೆಂದೇ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಅವರಿಗೆ ಅವರದೇ ಆದ ಕಾರ್ಯತಂತ್ರಗಳಿವೆ ಮತ್ತು ಇದನ್ನು ಸಾಸಲು ರೈತರ ಪ್ರತಿಭಟನೆಯು ಅವರಿಗೊಂದು ಮಾಧ್ಯಮವಾಗಿದೆ ಎಂದು ಸನ್ನಿ ಡಿಯೋಲ್ ತೀಕ್ಷ್ಣವಾಗಿ ಟ್ವೀಟ್ ಮಾಡಿದ್ದಾರೆ.
ದೀಪ್ ಸಿದ್ದು ಚುನಾವಣಾ ಸಂದರ್ಭ ತನ್ನ ಜೊತೆಗಿದ್ದವರು ನಂತರ ಸುದೀರ್ಘ ಕಾಲದಿಂದ ನನ್ನ ಸಹವಾಸದಲ್ಲಿಲ್ಲ. ಈಗ ಅವರು ಏನೇ ಹೇಳಿಕೆ ನೀಡುತ್ತಿದ್ದರೂ ಅವರ ಸ್ವಂತ ವಿಚಾರ. ಅವರ ಚಟುವಟಿಕೆಗಳಿಗೂ ತನಗೂ ಏನೇನೂ ಸಂಬಂಧ ಇಲ್ಲ. ತಾನು ಸದಾ ತನ್ನ ಪಕ್ಷ ಮತ್ತು ಕೃಷಿಕರ ಪರವಾಗಿರುವವನು. ಸರಕಾರ ರೈತರೊಂದಿಗೆ ಮಾತುಕತೆ ನಡೆಸಿ ಅವರಿಗೆ ಸೂಕ್ತ ಪರಿಹಾರ ನೀಡುವರೆಂಬ ಭರವಸೆ ತನಗಿದೆ ಎಂದಿದ್ದಾರೆ.
ನಟ ಹಾಗೂ ಸಾಮಾಜಿಕ ಕಾರ್ಯಕರ್ತ ದೀಪ್ ಸಿದ್ದು ರೈತರ ಪ್ರತಿಭಟನೆ ನೆಪದಲ್ಲಿ ಖಲಿಸ್ತಾನ ಪರ ಧ್ವನಿ ಎತ್ತಿದ್ದಾರೆ. ಹರ್ಯಾಣದಲ್ಲಿ ಇದೇ ವಿಚಾರವಾಗಿ ಪೆÇಲೀಸ್ ಸಿಬ್ಬಂದಿ ಜೊತೆಗಿನ ಈತನ ಸಂಭಾಷಣೆಯ ವಿಡಿಯೋ ವೈರಲ್ ಆಗುವ ಮೂಲಕ ಈತ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.