ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ, ವಿಶ್ವದ ಔಷದಾಲಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಲಸಿಕೆಗಳ ಸಂಶೋಧನೆಯಲ್ಲಿ ಭಾರತ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿ ಇರುವುದು ಮಾತ್ರವಲ್ಲದೇ ವಿಶ್ವದ ಲಸಿಕೆ ಉತ್ಪಾದನಾ ಕ್ಷೇತ್ರದಲ್ಲೂ ಅತ್ಯಂತ ನಿರ್ಣಾಯಕವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಪ್ರಧಾನಮಂತ್ರಿ, ದೇಶೀಯವಾಗಿ ಲಸಿಕೆ ಉತ್ಪಾದಿಸುತ್ತಿರುವ ಮೂರು ಪ್ರಮುಖ ನಗರಗಳಲ್ಲಿನ ಲಸಿಕಾ ತಯಾರಿಕಾ ಕಂಪೆನಿಗಳಿಗೆ ಭೇಟಿ ನೀಡಿ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದ್ದಾರೆ. ಅಹಮದಾಬಾದ್ನಲ್ಲಿರುವ ಝೈಡಸ್ ಬಯೋಟೆಕ್ ಪಾರ್ಕ್, ಹೈದರಾಬಾದ್ನಲ್ಲಿರುವ ಭಾರತ್ ಬಯೋಟೆಕ್ ಮತ್ತು ಪುಣೆಯಲ್ಲಿರುವ ಸೆರಂ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪೆನಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪೈಕಿ 2 ಕಂಪೆನಿಗಳು ದೇಶೀಯವಾಗಿ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ. ಇಡೀ ಮಾನವ ಕುಲವನ್ನು ಸಂರಕ್ಷಿಸುವ ಸಲುವಾಗಿ ಕೋಟ್ಯಂತರ ಪ್ರಮಾಣದಲ್ಲಿ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಲಸಿಕಾ ಉತ್ಪಾದನಾ ಸಂಸ್ಥೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ವಿಜ್ಞಾನಿಗಳಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಭೇಟಿ ನೀಡಿರುವುದಾಗಿ ತಿಳಿಸಿದ್ದರು ಮತ್ತು ಸಂಕಷ್ಟದ ಸಂದರ್ಭದಲ್ಲಿ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ವಿಜ್ಞಾನಿಗಳ ಪ್ರಯತ್ನಗಳನ್ನು ಅಭಿನಂದಿಸಿದ್ದರು.
Related Articles
ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್ಡೌನ್ ಘೋಷಣೆ
November 4, 2020
Varta Mitra News - RN
ರಾಷ್ಟ್ರೀಯ, ಆರೋಗ್ಯ, ಅಂತರರಾಷ್ಟ್ರೀಯ
Comments Off on ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್ಡೌನ್ ಘೋಷಣೆ
Seen By: 62 ಲಂಡನ್: ಬ್ರಿಟನ್ನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿದ್ದು, ಇದು ಎರಡನೇ ಹಂತದ ಅಲೆಯೆಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ [more]
ಆಡಳಿತಾರೂಢ ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿ ಬೀಳಬೇಕಾಗಿದ್ದ ಕಾಂಗ್ರೆಸ್ ತನ್ನ ಒಳಜಗಳಗಳಿಂದ ಪ್ರಬಲ್ಯ ಕಳೆದುಕೊಳ್ಳುತ್ತಿದೆ
July 14, 2021
Varta Mitra News - SP
ರಾಜ್ಯ
Comments Off on ಆಡಳಿತಾರೂಢ ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿ ಬೀಳಬೇಕಾಗಿದ್ದ ಕಾಂಗ್ರೆಸ್ ತನ್ನ ಒಳಜಗಳಗಳಿಂದ ಪ್ರಬಲ್ಯ ಕಳೆದುಕೊಳ್ಳುತ್ತಿದೆ
Seen By: 78 ಬೆಂಗಳೂರು, ಜು.14- ಆಡಳಿತಾರೂಢ ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿ ಬೀಳಬೇಕಾಗಿದ್ದ ಕಾಂಗ್ರೆಸ್ ತನ್ನ ಒಳಜಗಳಗಳಿಂದ ಪ್ರಬಲ ಪ್ರತಿಪಕ್ಷವಾಗುವ ಅವಕಾಶವನ್ನು ಕಳೆದುಕೊಳ್ಳುತ್ತಿದೆ ಎಂಬ ಆಕ್ಷೇಪಗಳು [more]
ಸಕ್ರಿಯ ಸೋಂಕಿತರ ಸಂಖ್ಯೆ 5 ಲಕ್ಷಕ್ಕಿಂತ ಕಡಿಮೆ
November 12, 2020
Varta Mitra News - SP
ರಾಷ್ಟ್ರೀಯ, ಆರೋಗ್ಯ
Comments Off on ಸಕ್ರಿಯ ಸೋಂಕಿತರ ಸಂಖ್ಯೆ 5 ಲಕ್ಷಕ್ಕಿಂತ ಕಡಿಮೆ
Seen By: 62 ಹೊಸದಿಲ್ಲಿ :ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಭದ್ರವಾಗಿ ಕಾಲೂರಿದ್ದು,ಈಗಾಗಲೇ ಹಲವು ಮೈಲಿಗಲ್ಲುಗಳನ್ನು ದಾಟಿದೆ ಜತೆಗೆ ಸತತ ಚೇತರಿಕೆ ಪ್ರಕರಣಗಳಿಂದಾಗಿ 106 ದಿನಗಳ ನಂತರ [more]