ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಸಿದ್ಧರಾಗಿ: ಕಟೀಲು ಕಾಂಗ್ರೆಸ್ ಮುಕ್ತ ಗ್ರಾಪಂಗೆ ಸಂಕಲ್ಪ

ಕೋಲಾರ: ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಗ್ರಾಪಂ ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರದ ಜನಪರ ಕಾರ್ಯವನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕರೆ ನೀಡಿದರು.
ಗ್ರಾಮ ಸ್ವರಾಜ್ ಸಮಾವೇಶಕ್ಕೆ ಚಾಲನೆ ನೀಡಿದ ಅವರು, ಪ್ರತಿ ಗ್ರಾಪಂನಲ್ಲೂ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಲಿಸಲು ಸಿದ್ಧರಾಗಿ, ಈ ದೇಶದ ಅಭಿವೃದ್ಧಿ ದೇಶ ಪ್ರೇಮ ಹೊಂದಿರುವ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಗಾಂ ಕನಸು ನನಸು:
ರಾಷ್ಟ್ರಪಿತ ಗಾಂೀಜಿ ಅವರ ರಾಮ ರಾಜ್ಯದ ಪರಿಕಲ್ಪನೆಯ ಕನಸು ನನಸು ಮಾಡಲು ಪ್ರಧಾನಿ ಮೋದಿ ಗ್ರಾಮಗಳ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಆದರೆ ಸುಮಾರು ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ಕೇವಲ ಗಾಂ ಅವರ ಹೆಸರಿನಲ್ಲಿ ಮತ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಹಾಗೂ ಕುಟುಂಬವೊಂದರ ಅಭಿವೃದ್ಧಿಗೆ ಸೀಮಿತವಾಯಿತು ಎಂದು ಟೀಕಿಸಿದರು.
ಗ್ರಾಮೀಣಾಭಿವೃದ್ಧಿ ಚಿಂತನೆ:
ಅಕಾರವಿದ್ದ ಅವಯಲ್ಲಿ ದೇಶದ ಗ್ರಾಮೀಣ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿಲ್ಲ, ಈ ಮೂಲಕ ಗಾಂೀಜಿಯವರ ಆದರ್ಶಗಳನ್ನು ಕಾರ್ಯಗತಗೊಳಿಸಲು ಕಾಂಗ್ರೆಸ್‍ನಿಂದ ಸಾಧ್ಯವಾಗಿಲ್ಲ ಎಂದು ದೂರಿದರು.
ದೇಶದ ಪ್ರತಿಯೊಂದು ಗ್ರಾಪಂಗೆ 35000 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಅನುದಾನವನ್ನು ಪಡೆದು ಗ್ರಾಮಗಳ ಮೂಲ ಸೌಲಭ್ಯವನ್ನು ಒದಗಿಸಲು ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಾರ್ಯಕರ್ತರು ಜಯಶೀಲರನ್ನಾಗಿ ಮಾಡಬೇಕು ಎಂದರು.
ಅಮೆರಿಕಾದಲ್ಲೂ ಮೋದಿ ಕಹಳೆ:
ವಿಶ್ವದಲ್ಲಿ ಪ್ರಧಾನಿ ಮೋದಿ ಅವರು ಪರಿವರ್ತನೆಗೆ ಕಾರಣರಾಗಿದ್ದಾರೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಘೋಷಣೆ ಅಮೆರಿಕದಲ್ಲೂ ಮೊಳಗಿದೆ. ಭಾರತ ಜಗತ್ತಿನಲ್ಲಿ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರು ವರ್ಷದಿಂದ ಮೋದಿ ಭ್ರಷ್ಟಾಚಾರ ಮುಕ್ತ ಅಕಾರ ನಡೆಸಿದ್ದಾರೆ. ದೇಶದ ಬಡವರ ಕಣ್ಣೀರು ಹೊರೆಸುವ ಕೆಲಸವನ್ನು ಮಾಡುತ್ತಿದ್ದಾರೆ, ಆದರೆ ವಿರೋಧ ಪಕ್ಷವಾದ ಕಾಂಗ್ರೆಸ್ ಯಾವುದೇ ಯೋಜನೆ ಬಡವರ ಹಾಗೂ ರೈತ ಪರವಾಗಿ ನೀಡಿಲ್ಲ, ಕೇವಲ ವೋಟ್ ಬ್ಯಾಂಕ್ ಆಗಿ ಅವರನ್ನು ಬಳಸಿಕೊಂಡಿತು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ