ಉತ್ಖನನದ ವೇಳೆ 1,300 ವರ್ಷ ಹಿಂದಿನ ದೇವಾಲಯ ಪತ್ತೆ ಪಾಕ್‍ನಲ್ಲಿ ಪುರಾತನ ವಿಷ್ಣು ಮಂದಿರ

ಪೇಶಾವರ್: ವಾಯುವ್ಯ ಪಾಕಿಸ್ಥಾನದ ಸ್ವಾತ್ ಜಿಲ್ಲೆಯಲ್ಲಿ 1,300 ವರ್ಷಗಳಷ್ಟು ಹಳೆಯದಾದ ಹಿಂದು ಮಂದಿರ ಪತ್ತೆಯಾಗಿದ್ದು, ಇದು ಭವಾನ್ ವಿಷ್ಣು ವಿನ ಮಂದಿರ ಎನ್ನುವುದು ವಿಶೇಷ.
ಸ್ವಾತ್ ಜಿಲ್ಲೆಯ ಬರಿಕೋಟ್ ಘುಂಡೈನಲ್ಲಿ ಪಾಕಿಸ್ಥಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಇತ್ತೀಚೆಗೆ ಉತ್ಖನನ ನಡೆಸಿದಾಗ 1,300 ವರ್ಷದ ಹಿಂದೆ ನಿರ್ಮಿಸಲಾಗಿರುವ ಭಗವಾನ್ ವಿಷ್ಣು ಮಂದಿರ ಪತ್ತೆಯಾಗಿದೆ.
ಕ್ರಿ.ಶ.850-1026ರ ಅವಯಲ್ಲಿ ಪೂರ್ವ ಅಫ್ಘಾನಿಸ್ಥಾನದಲ್ಲಿದ್ದ ಕಾಬುಲ್ ಕಣಿವೆ, ಆಧುನಿಕ ಪಾಕಿಸ್ಥಾನ-ಅಫ್ಘಾನಿಸ್ಥಾನದಲ್ಲಿರುವ ಮತ್ತು ಪ್ರಸ್ತುತ ವಾಯುವ್ಯ ಭಾರತದಲ್ಲಿರುವ ಗಾಂಧಾರವನ ಹಿಂದು ರಾಜವಂಶಕ್ಕೆ ಸೇರಿದ ಹಿಂದು ಶಾಹಿಗಳು ಅಥವಾ ಕಾಬುಲ್ ಶಾಹಿಗಳು ಆಳುತ್ತಿದ್ದರು. ಅವರ ಆಡಳಿತಾವಯಲ್ಲಿಯೇ ದೇವಾಲಯ ನಿರ್ಮಾಣವಾಗಿದ್ದು, ಸನಿಹದಲ್ಲಿಯೇ ದಂಡು ಮತ್ತು ಕಾವಲು ಗೋಪುರಗಳಿದ್ದ ಕುರುಹುಗಳು ಪತ್ತೆಯಾಗಿವೆ ಎಂದು ಪುರಾತತ್ವ ತಜ್ಞರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ