ಬೆಂಗಳೂರು: ರಾಜ್ಯಾದ್ಯಂತ ನಡೆದ ಕೆಎಸ್ಆರ್ಪಿ ಮತ್ತು ಐಆರ್ಬಿ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳು ಪತ್ತೆಯಾಗಿದ್ದು, ರಾಜ್ಯಾದ್ಯಂತ ಐವರನ್ನು ಬಂಸಲಾಗಿದೆ. ಅಲ್ಲದೆ ಸಹರಿಸಿದ ಇನ್ನಿತರ ಆರೋಪಿಗಳ ಬಂಧನಕ್ಕೂ ಪೊಲೀಸರು ಶೋಧ ನಡೆಸಿದ್ದಾರೆ.
ಬೆಂಗಳೂರು ನಗರದ ಇಂದಿರಾ ನಗರ ಠಾಣಾ ವ್ಯಾಪ್ತಿಯ ಕೈರಳಿ ನಿಕೇತನ್ ಟ್ರಸ್ಟ್ನಲ್ಲಿ ನಡೆಯುತ್ತಿದ್ದ ಕೆಎಸ್ಆರ್ಪಿ ಹುದ್ದೆಗಳ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿ ಸಾಗರ್ ವಡ್ಡರ್ ಪರವಾಗಿ ಬೇರೊಬ್ಬ ವ್ಯಕ್ತಿ ಪರೀಕ್ಷೆ ಬರೆಯಲು ಬಂದಿರುವುದಾಗಿ ಮಾಹಿತಿ ತಿಳಿದ ಪೊಲೀಸರು ಪರೀಕ್ಷಾ ಉಸ್ತುವಾರಿ ಅಕಾರಿಗಳ ಮೂಲಕ ಪರಿಶೀಲನೆ ನಡೆಸಿ ಗುರುನಾಥ್ ವಡ್ಡರ್ ಎಂಬಾತನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಾಗಾರ್ ವಡ್ಡರ್ ಹೆಸರಿನಲ್ಲಿ ತನ್ನ ಸ್ನೇಹಿತ ರಾಮು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಜೆ.ಬಿ.ನಗರ ಠಾಣಾವ್ಯಾಪ್ತಿಯ ಸೇಕ್ರೆಡ್ಹಾರ್ಟ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಸಿದ್ಧರೂಢ ವೈ ಬನಾಜ್ ಪರವಾಗಿ ಪರೀಕ್ಷೆ ಬರೆಯಲು ನಕಲಿ ದಾಖಲೆ ಸೃಷ್ಟಿಸಿಕೊಂಡು ಬಂದ ಮಹಂತೇಶ್ ಕೂಡ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ರಾಜಾಜಿನಗರದ ಎಸ್ಜೆಆರ್ಸಿ ಮಹಿಳಾ ಕಾಲೇಜು ಕೇಂದ್ರದಲ್ಲಿ ಹನುಮಂತ ಎಂಬವನ ಹೆಸರಿನಲ್ಲಿ ಮಲ್ಲಿಕಾರ್ಜುನ್, ಕೆಂಗೇರಿ ಜೆಎಸ್ಎಸ್ ಇಂಜಿನಿಯರಿಂಗ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶೃಂಗೇರಿ ಪೊಲೀಸ್ ಠಾಣೆಯ ಸಿವಿಲ್ ಕಾನ್ಸ್ಟೇಬಲ್ ನಾಗಪ್ಪ ತುಕ್ಕನವರ್ ಪರವಾಗಿ ಹಾಲಪ್ಪ ಹರಳೂರು ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.