ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ(ಕೆಎಸ್ಎಚ್ಡಿಸಿಎಲ್) ಕೊಟ್ಯಂತರ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಕಾರಿಗಳು ಆರೋಪಿ ಬಿ.ವೈ.ಶ್ರೀನಿವಾಸ್ನ 1.30 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದಾರೆ.
ವಿಜಯಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕರಾಗಿದ್ದ ಬಿ.ವೈ ಶ್ರೀನಿವಾಸ್ ಆಗ ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಅೀನದ ಕೆಎಸ್ಎಚ್ಡಿಸಿಎಲ್ಗೆ ಕೊಟ್ಯಂತರ ರೂ. ವಂಚಿಸಿದ್ದ. ಆಗ ಕೆಎಚ್ಡಿಸಿಎಲ್ನ ಅಂದಿನ ವ್ಯವಸ್ಥಾಪಕ ಕಿಶೋರ್ ಕುಮಾರ್ ವಿರುದ್ಧವೂ ಆರೋಪ ಕೇಳಿಬಂದಿತ್ತು. ಇದರಲ್ಲಿ 16.67 ಕೋಟಿ ರೂ.ನಕಲಿ ಖಾತೆಗೆ ರವಾನಿಸಲಾಗಿತ್ತು. ಈ ಕುರಿತು ಅಶೋಕನಗರ ಠಾಣೆಯಲ್ಲಿ ಕೆಎಚ್ಡಿಸಿಎಲ್ನ ವ್ಯವಸ್ಥಾಪಕ ಸಲಹೆಗಾರ ದೂರು ದಾಖಲಿಸಿದ್ದರು