ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಎಸಿಬಿ ದಾಳಿಗೆ ಒಳಗಾದ ಕೆಎಎಸ್ ಅಕಾರಿ ಡಾ. ಬಿ.ಸುಧಾ ಅವರ ಆಪ್ತರ ಮನೆ ಮೇಲೂ ದಾಳಿ ನಡೆಸಲಾಗಿದ್ದು, ಕೋಟ್ಯಂತ ರೂ. ಮೌಲ್ಯದ ಆಸ್ತಿ ಪತ್ರ, ನಗನಾಣ್ಯ ಹಾಗೂ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ.
ರೇಣುಕಾಚಂದ್ರಶೇಖರ್ ಅವರು ಸುಧಾ ಅವರ ಆಪ್ತೆಯಾಗಿದ್ದು, ಸುಧಾ ಹೇಳಿದ ಕಡೆಗಳಿಗೆ ಹೋಗಿ ಏಜೆಂಟ್ ರೀತಿಯಲ್ಲಿ ಹಣ ಪಡೆದುಕೊಳ್ಳುತ್ತಿದ್ದ ಶಂಕೆ ಮೇರೆಗೆ ಬ್ಯಾಟರಾಯನಪುರದಲ್ಲಿ ರೇಣುಕಾ ಫ್ಲಾಟ್ ಮೇಲೆ ಎಸಿಪಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ, ಎಸ್ಪಿ ಕುಲ್ದೀಪ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತು. ದಾಳಿ ವೇಳೆ 3.5 ಕೆ.ಜಿ.ಚಿನ್ನ , 7 ಕೆ.ಜಿ ಬೆಳ್ಳಿ, 32ಲಕ್ಷ ರೂ. ನಗದು, ಸುಮಾರು 250ಕೋಟಿ ರೂ. ಬೆಲೆ ಬಾಳುವ ಆಸ್ತಿ ಪತ್ರ, 40ಬ್ಯಾಂಕ್ ಪಾಸ್ಬುಕ್ ಪತ್ತೆಯಾಗಿದ್ದು, 4 ಕೋಟಿ ಹಣ ಠೇವಣಿ ಇಟ್ಟಿರುವುದು ತಿಳಿದು ಬಂದಿದೆ.
ನೂರಕ್ಕೂ ಹೆಚ್ಚು ಚೆಕ್ಗಳು ಮತ್ತು ಅಗ್ರಿಮೆಂಟ್ ಪೇಪರ್ಗಳು ಪತ್ತೆಯಾಗಿದ್ದು, ದಾಳಿ ನಡೆಸಿದ ಎಸಿಬಿ ಅಕಾರಿಗಳಿಗೆ ರೇಣುಕಾ ಅವರ ಬ್ಯಾಂಕ್ ವಹಿವಾಟಿನ ಲೆಕ್ಕಾಚಾರ ಮಾಡಲು ಇನ್ನೂ ಮೂರು ದಿನ ಬೇಕು ಎನ್ನಲಾಗುತ್ತಿದೆ.
ವೇತನ ಮೀರಿ ಆದಾಯ ಹೊಂದಿದ ಆರೋಪದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಆಡಳಿತಾಕಾರಿಯಾಗಿರುವ ಸುಧಾ ಆಸ್ತಿ-ಪಾಸ್ತಿಗೆ ಸಂಬಂಸಿದ 6 ಕಡೆ ಶನಿವಾರ ಎಸಿಬಿ ಏಕಕಾಲಕ್ಕೆ ದಾಳಿ ನಡೆಸಿತ್ತು. ಅಲ್ಲದೆ ಈಕೆ ಬೇನಾಮಿ ಹೊಂದಿರುವ ಶಂಕೆಯೂ ವ್ಯಕ್ತವಾಗಿದೆ. ದಾಳಿ ವೇಳೆ 10ಲಕ್ಷ ರೂ. ನಗದು, 1ಕೆ.ಜಿ.ಚಿನ್ನ ಅಕ್ರಮ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಪ್ರಕರಣ ಗಂಭೀರತೆ ಪಡೆದುಕೊಂಡಿದೆ. ಈ ಹಿನ್ನೆಲೆ ಆಸ್ತಿಗಳಿಕೆಯ ಮೂಲ ಮತ್ತೆ ಹೆಚ್ಚಲು ಅಕಾರಿಗಳು ಭಾನುವಾರವೂ ಪರಿಶೀಲನೆ ಮುಂದುವರಿಸಿದ್ದಾರೆ.
ಐಷಾರಾಮಿ ಕಾರು, ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ, 5ಕೋಟಿ ರೂ. ಮೌಲ್ಯದ ಅಪಾರ್ಟ್ಮೆಂಟ್, ವಿಲ್ಲಾವನ್ನು ಹೊಂದಿರುವ ಬಗ್ಗೆ ಎಸಿಬಿ ಅಕಾರಿಗಳು ನಡೆಸಿದ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಈ ಹಿನ್ನೆಲೆ ಪ್ರಕರಣ ಹೆಚ್ಚಿನ ತನಿಖೆಗೆ ಜಾರಿ ನಿರ್ದೇಶನಾಲಯ (ಇಡಿ) ಅಕಾರಿಗಳು ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.