ಮಳೆಗೆ ತೊಯ್ದ ಕಟಾವು, ಶೇಂಗಾ ಬಳ್ಳಿಯಲ್ಲೇ ಮೊಳಕೆ

????????????????????????????????????????????????????????????????????????????????????????????????????????????????????????????????????????????????????????????????????????????????????????????

ಪರಶುರಾಂಪುರ: ವಾಯುಬಾರ ಕುಸಿತದಿಂದ ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಮಳೆಗೆ ಶೇಂಗಾ ಬೆಳೆದ ರೈತರು ಹಾನಿ ಅನುಭವಿಸುತ್ತಿದ್ದಾರೆ. ಬೆಳೆ ಕಟಾವು ಮಾಡಿ ಶೇಂಗಾ ಬಳ್ಳಿ ಕಪ್ಪಾಗಿ ಕೊಳೆತದನ್ನ ಮನೆಗೆ ಕೊಂಡಯ್ಯಲಾಗದೇ ಅತಂತ್ರ ಸ್ಥಿತಿಯಲ್ಲಿ ರೈತರಿದ್ದಾರೆ. ಹೀಗಾಗಿ ಕೆಲವೆಡೆ ಕಟಾವು ಮಾಡಿದ ಶೇಂಗಾ ಜಮೀನಿನಲ್ಲಿ ಮೊಳಕೆ ಒಡೆದಿದೆ.
ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರೈತರು ಸುರಿದ ಮಳೆಗೆ ಶೇಂಗಾ ಬೆಳೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಬಯಲು ಸೀಮೆಯ ವಾಣಿಜ್ಯ ಬೆಳೆ ಶೇಂಗಾವನ್ನು ಬಿತ್ತನೆ ಮಾಡಿದ್ದಾಗ ಮಳೆಯು ಭರವಸೆ ನೀಡಿದ್ದರಿಂದ ಹೆಚ್ಚಾಗಿ ಬಿತ್ತನೆಯಾಗಿತ್ತು. ಆದರೆ ಅದೇ ಮಳೆ ಹೆಚ್ಚಾಗಿ ಬೆಂಕಿ, ಸೈನಿಕ ಹುಳ ಸೇರಿದಂತೆ ಹಲವು ರೋಗಗಳಿಗೆ ಸಾಥ್ ನೀಡಿ ಅತಿವೃಷ್ಟಿಗೆ ಕಾರಣವಾಗಿದೆ. ಈ ವರ್ಷ ವರುಣ ದೇವ ಕೈಹಿಡಿದಾನು ಎಂದು ಕೊರೋನಾ ಸೋಂಕಿನಿಂದ ಸ್ವಗ್ರಾಮಕ್ಕೂ ಬಂದವರು ಕೃಷಿಗೆ ಕಡೆ ಮುಖ ಮಾಡಿ ಸಾಲ ಮಾಡಿಕೊಂಡಿದ್ದಾರೆ.
ಬೇಡವಾದ ಮಳೆಯಿಂದ ವರ್ಷದ ಕಟಾವು ನಷ್ಟ
ಬೇಡವಾದ ಸಮಯದಲ್ಲಿ ಸುರಿಯುತ್ತಿರುವ ಮಳೆಯು ವರ್ಷದ ದುಡಿಮೆ ಹಾಳು ಮಾಡಿದೆ. ಕೈಗೆ ಬೆಳೆ ಬರುವ ಸಮಯದಲ್ಲಿ ಮಳೆಯು ಅಡ್ಡಿಯಾಗಿ ಇಳುವರಿ ಕಡಿಮೆಯಾಗಿದೆ. ಮತ್ತೊಂದೆಡೆಯಲ್ಲಿ ಬೆಲೆಯಲ್ಲಿ ಆಗುತ್ತಿರುವ ಇಳಿಕೆಯಿಂದ ಹೈರಾಣಾಗಿದ್ದಾರೆ ಎಂದು ರೈತ ನಾಗರಾಜು ಅಸಾಯಕತೆ ವ್ಯಕ್ತಪಡಿಸಿದರು.
ಶೇಂಗಾ ಕಾಯಿಯಲ್ಲಿ ಹೆಚ್ಚಾದ ಜೊಳ್ಳು
ಕಾಯಿಕಟ್ಟುವ ಸಮಯದಲ್ಲಿ ಮಳೆಯ ನಿರಂತರತೆಯಿಂದ ಶೇಂಗಾ ಕಾಯಿಯಲ್ಲಿ ಜೊಳ್ಳು ಜಸ್ತಿಯಾಗಿದೆ. ಜಿಟಿಜಿಟಿ ಮಳೆಗೆ ಜಮೀನಿನಲ್ಲಿದ್ದ ಕಟಾವು ಬಳ್ಳಿ ನೆನೆದು ಜನುವಾರುಗಳಿಗೂ ಮೇವು ಜತೆಗೆ ಶೇಂಗಾ ಕಾಯಿಗಳು ಕಪ್ಪಾಗಿ ಉದುರುತ್ತಿವೆ. ಅಷ್ಟೇ ಅಲ್ಲದೇ ಬಳ್ಳಿಯಲ್ಲಿ ಮೊಳಕೆ ಬಂದು ರೂಪಾಯಿಯಲ್ಲಿ ಎಂಟಾಣೆಯಷ್ಟು ಬಂದಿರುವ ಶೇಂಗಾವನ್ನ ಮಾರಬೇಕು ಎಂದು ಒಣಗಿಸಿ ಮಾರುವಷ್ಟರಲ್ಲಿ ಮಾರುಕಟ್ಟೆಯಲ್ಲಿ ಬಾಯಿಗೆ ಬಂದಂತಹ ದರ ಹೇಳುತ್ತಾರೆ ಎಂದು ರೈತ ಹನುಮಂತರಾಯ ಪರಿಸ್ಥಿತಿಯ ಗಂಭೀರತೆಯನ್ನ ವಿವರಿಸಿದರು.
ಬೆಳೆ ಬಂದರೂ ಕೈಗೆ ಸಿಗದೇ, ಇಳುವರಿ ಕಡಿಮೆಯಾಗಿ ಇರುವ ಅಲ್ಪ ಬೆಳೆಯನ್ನ ಪಡೆಯಲು ರೈತರು ತೊಳಲಾಡುತ್ತಿದ್ದರೆ. ರೈತ ವರ್ಷದ ದುಡಿಮೆಗೆ ಬೆವರು ಹರಿಸುವುದು ಕಡಿಮೆಯಾಗಿಲ್ಲ ಆದರೆ ದುಡಿಮೆಗೆ ತಕ್ಕ ಬೆಲೆ ಸಿಗುತ್ತಿಲ್ಲ ಎನ್ನವುದು ರೈತರ ನೋವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ