ಸನ್ನತಿ ಬ್ಯಾರೇಜಿನಿಂದ ಭೀಮಾ ನದಿಗೆ 4 ಲಕ್ಷ ಕ್ಯೂಸೆಕ್ ನೀರು ಕಾಳಜಿ ಕೇಂದ್ರಗಳಿಗೆ 12 ಗ್ರಾಮದ ಜನ ಸ್ಥಳಾಂತರ

ಯಾದಗಿರಿ: ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸನ್ನತಿ ಬ್ಯಾರೇಜಿನಿಂದ ಮಂಳವಾರ ಸಂಜೆ 4 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ನದಿ ಪಾತ್ರ ಗ್ರಾಮಗಳ ಜನತೆ ಪ್ರವಾಹದ ಭೀತಿಯಲ್ಲಿ ಕಾಲಕಳೆಯುವಂತಾಗಿದೆ.
ಜಿಲ್ಲೆಯಲ್ಲಿ ಮಳೆಯಿಲ್ಲದಿದ್ದರೂ ಭೀಮಾ ನದಿ ಉಕ್ಕಿ ಹರಿಯುತ್ತಿದೆ. ಕೆಲ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಈಗಾಗಲೇ 12 ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ 14 ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಸೇನಾ ತುಕಡಿ ಮತ್ತು 2 ಎನ್‍ಡಿ ಆರ್‍ಎಫ್ ತಂಡಗಳು ಜಿಲ್ಲೆಯಲ್ಲಿ ಬೀಡುಬಿಟ್ಟಿವೆ.
ನದಿಗೆ 4 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಕಾರಣ ನಗರದ ಕೆಲ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆದೆ ಇದೆ. ಈಗಾಗಲೇ ನಾಯಕಲ್ ಗ್ರಾಮದ ಹತ್ತಾರು ಸೇತುವೆ ಮುಳುಗಡೆಯಾಗಿವೆ. ಶಹಪುರ ಮತ್ತು ಯಾದಗಿರಿ ರಾಜ್ಯ ಹೆದ್ದಾರಿ ಸ್ಥಗಿತವಾಗಿದೆ. ಅಲ್ಲದೆ ನಗರದ ಹೊರವಲಯದ ಹಳ್ಳಕ್ಕು ಹೆಚ್ಚಿನ ಪ್ರಮಾಣದಲ್ಲಿ ಹಿನ್ನೀರು ಹರಿದು ಬಂದ ಕಾರಣ ಸೇತುವೆಯ ಮೇಲೆ ನೀರು ಬರುವ ಸಾಧ್ಯತೆ ಇದೆ. ಇದರ ಜೊತೆಗೆ ರೈಲು ನಿಲ್ದಾದಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಅಕ ಮಳೆ ಮತ್ತು ಪ್ರವಾಹದಿಂದ 46 ಸಾವಿರ ಹೆಕ್ಟೇರ್ ಬೆಳೆಗಳು ನಾಶವಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಇತ್ತೀಚೆಗೆ ಬೀಸಿ ಗಾಳಿ ಮತ್ತು ಮಳೆಯಿಂದ ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ಬಿತ್ತನೆ ಮಾಡಿದ ಭತ್ತ ನೆಲಕಚ್ಚಿದ್ದು ರೈತರ ನಿದ್ದೆ ಕೆಡಿಸಿದೆ.

ಬಹುನಿರೀಕ್ಷೆಯಲ್ಲಿ ಜನ
ಪ್ರವಾಹದಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಕೃಷಿ ಜಮೀನು ಸಂಪೂರ್ಣ ಕೊಚ್ಚಿ ಹೋಗಿದೆ. ಬೆಳೆನಾಶವಾಗಿದೆ. ಮನೆಗಳು ಕುಸಿದುಬಿದ್ದಿವೆ. ಜನರು ಬಹುತೇಕವಾಗಿ ನಿರಾಶ್ರಿತರಾಗಿದ್ದಾರೆ. ಸರ್ಕಾರ ಸಮರೋಪಾದಿಯಲ್ಲಿ ಇಲ್ಲಿನ ನಿರಾಶ್ರಿತರಿಗೆ ಪರಿಹಾರ ಒದಗಿಸಬೇಕಿದೆ. ಜತೆಗೆ ಕುಸಿದ ಮನೆಗಳ ಪುನರ್ ನಿರ್ಮಾಣ, ಕೃಷಿ ಜಮೀನಿನಲ್ಲಿ ಉಂಟಾದ ನಷ್ಟವನ್ನು ತಕ್ಷಣವೇ ಸ್ಪಂದಿಸಿ ರೈತ ಸಮೂಹವನ್ನು ಉಳಿಸಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ