ಚೀನಾಗೆ ಸೆಡ್ಡು: ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿ; ಭಾರತದಿಂದ ಘೋಷಣೆ!

ನವದೆಹಲಿ: ಮುಂದಿನ ತಿಂಗಳು ಭಾರತ-ಅಮೆರಿಕಾ-ಜಪಾನ್ ನಡುವಿನ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಕೂಡ ಭಾಗಿಯಾಗಲಿದೆ ಎಂದು ಭಾರತ ಅಧಿಕೃತ ಘೋಷಣೆ ಮಾಡಿದೆ.
ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಸಹ ಭಾಗವಹಿಸಲಿದೆ ಎಂದು ಭಾರತದ ರಕ್ಷಣಾ ಇಲಾಖೆ ಅಧಿಕೃತ ಘೋಷಣೆ ಮಾಡಿದೆ.
ಇನ್ನು ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಮೂರು ರಾಷ್ಟ್ರಗಳ ಬದಲಿಗೆ ನಾಲ್ಕು ರಾಷ್ಟ್ರಗಳು ಅದರಲ್ಲೂ ವಿಶ್ವದ ಮೂರು ಶಕ್ತಿಶಾಲಿ ನೌಕಾಪಡೆಗಳು ಭಾಗವಹಿಸಲಿವೆ.
ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ತನ್ನ ಸೈನಿಕರನ್ನು ನಿಯೋಜಿಸಿ ತಂಟೆ ನೀಡುತ್ತಿರುವ ಬೆನ್ನಲ್ಲೇ ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಸಹ ಭಾಗವಹಿಸುತ್ತಿರುವುದು ಚೀನಾಗೆ ಮರ್ಮಾಘಾತವನ್ನೇ ನೀಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ