ಚಿಕ್ಕಬಳ್ಳಾಪುರಕ್ಕೆ ಕೊರೋನಾ ಕಂಟಕ, ಒಂದೇ ದಿನ 51 ಪ್ರಕರಣ ಪತ್ತೆ: ರಾಜ್ಯದಲ್ಲಿ 1710ಕ್ಕೇರಿದ ಸೋಂಕಿತರ ಸಂಖ್ಯೆ!

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಮಹಾಮಾರಿ ತಾಂಡವವಾಡುತ್ತಿದ್ದು ಒಂದೇ ದಿನ 51ಮಂದಿಗೆ ಸೋಂಕು ವಕ್ಕರಿಸಿದೆ. ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 105 ಪ್ರಕರಣ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1710ಕ್ಕೇರಿಕೆಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಕಳೆದ 24 ಗಂಟೆಯಲ್ಲಿ 51 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಅಲ್ಲಿ ಸೋಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಹಾಸನ 14, ಬೆಂಗಳೂರು 5, ಹಾವೇರಿ 3, ತುಮಕೂರು 8, ಬೆಂಗಳೂರು ಗ್ರಾಮಾಂತರ 4, ಬೀದರ್ 6, ಧಾರವಾಡ 2 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ.

1710 ಪ್ರಕರಣಗಳ ಪೈಕಿ 588 ಮಂದಿ ಗುಣಮುಖರಾಗಿದ್ದಾರೆ. 1080 ಮಂದಿ ಸದ್ಯ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಾಗಲೇ 41 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ