ಉಡುಪಿಯಲ್ಲಿ ಫಸ್ಟ್​​ನೈಟ್ ದಿನವೇ ಮದುಮಗನಿಗೆ ಶಾಕ್: 18 ಮಂದಿಗೆ ಹೋಂ ಕ್ವಾರಂಟೈನ್

ಬೆಳ್ಮಣ್: ಕೊರೋನಾ ವೈರಸ್ ಹಿನ್ನಲೆ ಲಾಕ್ಡೌನ್ ಮಾಡಲಾಗಿದ್ದು, ಹೊರ ರಾಜ್ಯಕ್ಕೆ ಮತ್ತು ಹೊರ ಜಿಲ್ಲೆಗಳಿಗೆ ತೆರಳುವುದನ್ನು ನಿಷೇಧಿಸಲಾಗಿದೆ. ಇಷ್ಟಿದ್ದರೂ ಉಡುಪಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಡಿಭಾಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದರೂ ಒಳ ಮಾರ್ಗದಿಂದ ಜನರು ತಮ್ಮ ಮನೆ ಸೇರುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಸದ್ಯ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಒಳ ರಸ್ತೆಯಿಂದ ಬಂದು ಮನೆಯನ್ನು ಸೇರಿದ 18 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ವಿವಿಧ ಪ್ರಕರಣಗಳಲ್ಲಿ ಒಟ್ಟು 26 ಮಂದಿಯನ್ನು ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್ ಮಾಡಿದೆ.

ಜಿಲ್ಲಾಗಡಿ ಸಂಪೂರ್ಣ‌ ಬಂದ್ ಮಾಡಲಾಗಿದ್ದರೂ ಮದುವೆಗಾಗಿ ಕಾರ್ಕಳಕ್ಕೆ ಒಳದಾರಿಯಿಂದ ಅನ್ಯ‌ ಜಿಲ್ಲೆಯ ಜನರು ಆಗಿಮಿಸಿದ್ದರು. ಸದ್ಯ ಹೀಗೆ ಹೊರ‌ಜಿಲ್ಲೆಯ ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.
ಇನ್ನೂ ಆರೋಗ್ಯ ಇಲಾಖೆ ಉಡುಪಿಯ ಮದುಮಗನಿಗೆ ಸೀಲ್ ಹಾಕಿ ಹೋಮ್ ಕ್ವಾರಂಟೈನ್ ಹಾಕಿದೆ. ಮಂಗಳೂರಿನ ಯುವಕನೋರ್ವ ಉಡುಪಿ ಪರಿಸರದಲ್ಲಿರುವ ಮಾಹಿತಿ ಪಡೆದು ಪರಿಶೀಲಿಸಿದಾಗ ಅವರಿಗೆ ಅದೇ ದಿನ ಕುತ್ಯಾರಿನಲ್ಲಿ ಮದುವೆ ಆಗಿದೆ ಎಂಬ ಮಾಹಿತಿ ತಿಳಿದಿದೆ. ಇದರಿಂದ ಫಸ್ಟ್‌ನೈಟ್‌ನ ಸಂಭ್ರಮವೇ ಇಲ್ಲದಂತಾಯಿತು. ಮದುವೆ ಮುಗಿಸಿ ಸಂಜೆ ಮನೆಗೆ ಬಂದ‌ ಮದುಮಗನಿಗೆ ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು, ಮಂಗಳೂರು, ದಾವಣಗೆರೆ, ಬಂಟ್ವಾಳದಿಂದ ಮದುವೆಗೆ ಬಂದಿದ್ದ ಒಟ್ಟು 18 ಮಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ಇದರ ಜೊತೆಗೆ ಅಜೆಕಾರಿನಲ್ಲಿ ಮದುವೆಗೆ ಹೋಗಿದ್ದ 8 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ