ರಾಜ್ಯದಲ್ಲಿಂದು 8 ಕೊರೋನಾ ಕೇಸ್​ ಪತ್ತೆ; ಒಟ್ಟು 20 ಸಾವು, 511 ಜನರಿಗೆ ಸೋಂಕು

ಬೆಂಗಳೂರು: ಕೇಂದ್ರ ಸರ್ಕಾರ ಘೋಷಿಸಿರುವ ಲಾಕ್ಡೌನ್ಮುಗಿಯಲು ಕೇವಲ 6 ದಿನಗಳ ಬಾಕಿ ಇವೆ. ಆದರೂ ಇನ್ನೂ ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ರಾಜ್ಯದಲ್ಲಿ ಇಂದು 8 ಹೊಸ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈಗಾಗಲೇ 20 ಜನರು ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ಕರ್ನಾಟಕದಲ್ಲಿ 8 ಜನರಲ್ಲಿ ಕೊರೋನಾ ವೈರಸ್​ ಪತ್ತೆಯಾಗಿದೆ. ಬೆಂಗಳೂರು-1, ಮಂಡ್ಯದ ನಾಗಮಂಗಲ-1, ದಕ್ಷಿಣ ಕನ್ನಡ- 2, ಬಾಗಲಕೋಟೆಯ ಜಮಖಂಡಿ- 2, ವಿಜಯಪುರ- 2 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ.

ಇಂದು ಬೆಳಗ್ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ ಕೊರೋನಾ ಸೋಂಕಿತನೋರ್ವ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 511 ಸೋಂಕಿತರಲ್ಲಿ 188 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಪತ್ತೆಯಾದ ಕೊರೋನಾ ಸೋಂಕಿತರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 80 ವರ್ಷದ ವೃದ್ಧೆ ಕೂಡ ಸೇರಿದ್ದಾರೆ. ಇವರಿಗೆ ಕುಟುಂಬದ ಸೋಂಕಿತರಿಂದ ಕೊರೋನಾ ಹರಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ