ಹೊಸ ಪ್ರದೇಶಕ್ಕೆ ಹರಡದಂತೆ ನೋಡಿಕೊಳ್ಳಿ

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬಹಳ ಸೊಗಸಾಗಿ ಲಾಕ್‍ಡೌನ್ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುತ್ತಿವೆ. ಕಳೆದ 21 ದಿನದಲ್ಲಿ ಸೋಂಕನ್ನು ಸಾಕಷ್ಟು ನಿಯಂತ್ರಣದಲ್ಲಿರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಹೊಸ ಪ್ರದೇಶಕ್ಕೆ ಸೋಂಕು ಹರಡದೇ ಇರುವ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಯಾವುದೇ ಹೊಸ ಪ್ರದೇಶಕ್ಕೆ ಸೋಂಕು ಹರಡಲು ಬಿಡಬಾರದು ಎಂದು ನಾನು ಎಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ. ಹಾಗಾಗಿಯೇ ಹಾಟ್ ಸ್ಪಾಟ್ ಕ್ಷೇತ್ರಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ವಹಿಸಲಾಗುವುದು. ಏ.20ರ ತನಕ ಪ್ರತಿ ನಗರ, ಪೊಲೀಸ್ ಠಾಣೆ, ಜಿಲ್ಲೆ ಹಾಗೂ ಪ್ರತಿರಾಜ್ಯದಲ್ಲಿ ಲಾಕ್‍ಡೌನ್ ಸರಿಯಾಗಿ ಪಾಲನೆಯಾಗುತ್ತಿದೆಯಾ ಎಂಬುದನ್ನು ಕಠಿಣವಾಗಿ ಪರಿಶೀಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ