ಮೂರು ವಾರಗಳಿಗೆ ಲಾಕ್‍ಡೌನ್ ವಿಸ್ತರಣೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದು, ದೇಶದಲ್ಲಿ ಮೇ 3ರ ತನಕ ಲಾಕ್‍ಡೌನ್ ಘೋಷಿಸಿz್ದÁರೆ. ಅಲ್ಲದೇ, ಎರಡನೇ ಅವಯ ಲಾಕ್‍ಡೌನ್ ಇನ್ನಷ್ಟು ಕಠಿಣವಾಗಿರಲಿದ್ದು, ಬುಧವಾರ ಲಾಕ್‍ಡೌನ್ ಕುರಿತಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಜತೆಗೆ ಏಳು ವಿಚಾರಗಳಲ್ಲಿ ತಮ್ಮೊಂದಿಗೆ ದೇಶದ ಜನತೆ ಕೈಜೋಡಿಸಿ ಎಂದು ಕರೆ ನೀಡಿದ್ದಾರೆ.

ಮೋದಿ ತಮ್ಮ 25 ನಿಮಿಷದ ಭಾಷಣದಲ್ಲಿ, ಕೊರೋನಾ ವಿರುದ್ಧ ದೇಶದ ಹೋರಾಟವನ್ನು ಎತ್ತಿಹಿಡಿದಿದ್ದಾರೆ. ವಿಶ್ವದದೊಡ್ಡ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಸೋಂಕಿನ ಪರಿಸ್ಥಿತಿ ಬಹಳ ನಿಯಂತ್ರಣದಲ್ಲಿದೆ ಎಂದೂ ಹೇಳಿದ್ದಾರೆ.

ಮೊದಲ ಹಂತದ ಲಾಕ್‍ಡೌನ್‍ನಿಂದಾಗಿ ನಿಜಕ್ಕೂ ದೇಶ ದೊಡ್ಡ ಮಟ್ಟದ ಅಪಾಯದಿಂದ ಪಾರಾಗಿದೆ. ಸೋಂಕು ಬಹುತೇಕ ಹಂತದವರೆಗೂ ನಿಯಂತ್ರಣದಲ್ಲಿದೆ. ಆದರೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಆರೋಗ್ಯ ತಜ್ಞರೆಲ್ಲರೂ ಹಾಗೂ ಸಾರ್ವಜನಿಕರು ಕೂಡ ಲಾಕ್‍ಡೌನ್ ಮುಂದುವರಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮೇ 3 ತನಕ ಲಾಕ್‍ಡೌನ್ ಮುಂದುವರಿಯಲಿದ್ದು, ಕೊರೋನಾ ವಿರುದ್ಧ ಹೋರಾಡುವ ದೇಶದ ಉದ್ದೇಶಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ತಿಳಿಸಿದ್ದಾರೆ.

ಇದುವರೆಗೂ ಲಾಕ್‍ಡೌನ್ ವೇಳೆ ಜನ ತೋರಿರುವ ತಾಳ್ಮೆ ಹಾಗೂ ಸಹನೆಗೆ ನಾನು ನಿಜಕ್ಕೂ ತಲೆಬಾಗುತ್ತೇನೆ. ಅದರಲ್ಲೂ ಹಬ್ಬ ಹರಿದಿನಗಳನ್ನು ಜನರು ಮನೆಯಲ್ಲಿಯೇ ಅತ್ಯಂತ ಸರಳವಾಗಿ ಆಚರಿಸುತ್ತಿರುವುದು ಖುಷಿಯಾಗುತ್ತದೆ. ಇಂದು ಜನರ ಸಂವೇದನಾ ಶೀಲತೆಯಿಂದಲೇ ಕೊರೋನಾ ವಿರುದ್ಧ ಭಾರತ ಜಯಶಾಲಿಯಾಗಲು ಸಾಧ್ಯವಾಗಿದೆ. ಹೀಗೆಯೇ ಜನ ಇನ್ನೂ ಮೂರು ವಾರ ಒಟ್ಟಾಗಿ ತಾಳ್ಮೆ ಪ್ರದರ್ಶಿಸಬೇಕಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ