ದೇಶ ಉದ್ದೇಶಿಸಿ ನಾಳೆ ಪ್ರಧಾನಿ ಮೋದಿ ಮಾತು

ಹೊಸದಿಲ್ಲಿ: ಕೊರೋನಾ ವಿರುದ್ಧ ಹೋರಾಡಲು ದೇಶಾದ್ಯಂತ ಲಾಕ್‍ಡೌನ್ ಅವ ವಿಸ್ತರಿಸಬೇಕೆಂದು ವಿವಿಧ ರಾಜ್ಯಗಳಿಂದ ಪ್ರಸ್ತಾವನೆ ಬಂದಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಏಪ್ರಿಲ್ 30ರವರೆಗೆ ಲಾಕ್‍ಡೌನ್ ವಿಸ್ತರಿಸುವ ಹಾಗೂ ಕುಸಿದಿರುವ ಆರ್ಥಿಕತೆ ಪುನರುಜ್ಜೀವಿಸುವ ಕುರಿತು ಕ್ರಮಗಳನ್ನು ಘೋಷಿಸುವ ಬಗ್ಗೆ ನಿರೀಕ್ಷೆಯಿದೆ.

ಶನಿವಾರ ಸುಮಾರು 13 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದಿದ್ದ ವಿಡಿಯೋ ಕಾನರೆನ್ಸ್ ಸಭೆಯಲ್ಲಿ, ಸೋಂಕು ತಡೆಗಟ್ಟಲು ದೀರ್ಘಾವ ಲಾಕ್‍ಡೌನ್ ಘೋಷಿಸುವ ಅಗತ್ಯವಿದೆ ಎಂದು ಮೋದಿ ಒಪ್ಪಿದ್ದರು. ಈ ವೇಳೆ ದೇಶದ ಜನರ ಜೀವನ ಹಾಗೂ ಜೀವನೋಪಾಯ ಸುರಕ್ಷಿತವಾಗಿಡಿಲು ಭಾರತ ಸರ್ಕಾರ ಬದ್ಧವಾಗಿದೆ ಎಂದೂ ತಿಳಿಸಿದ್ದರು.

ಇನ್ನು ಕೊರೋನಾ ಸೋಂಕು ಹರಡುವಿಕೆ ಪ್ರಮಾಣ ಗಮನದಲ್ಲಿಟ್ಟುಕೊಂಡು, ದೇಶದ ವಿವಿಧ ಜಿಲ್ಲೆಗಳನ್ನು ಕೆಂಪು, ಹಳದಿ ಹಾಗೂ ಹಸಿರು ವಲಯಗಳಾಗಿಯೂ ವರ್ಗೀಕರಿಸಬೇಕೆಂಬ ಪ್ರಸ್ತಾವನೆ ಪ್ರಧಾನಿ ಎದುರಿದೆ. ಅಲ್ಲದೇ ಸೋಂಕು ಹರಡದೇ ಇರದ ದೇಶದ ಸುಮಾರು 400 ಜಿಲ್ಲೆಗಳನ್ನು ಹಸಿರು ವಲಯವೆಂದು ಘೋಷಿಸಬೇಕೆಂಬ ಪ್ರಸ್ತಾವನೆಯನ್ನು ಅಕಾರಿಗಳು ಸಲ್ಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ