7 ತಾಸಿನ ಶಸ್ತ್ರಚಿಕಿತ್ಸೆ ನಂತರ ಪೇದೆ ಕೈ ಮರುಜೋಡಣೆ

ಚಂಡೀಗಢ : ಲಾಕ್‍ಡೌನ್ ನಿಯಮ ಮೀರಿ ಪೊಲೀಸ್ ಬ್ಯಾರಿಕೇಡ್ ಮುರಿದು ಸಾಗುತ್ತಿದ್ದ ವಾಹನ ನಿಲ್ಲಿಸಿ, ಕರ್ತವ್ಯ ನಿಷ್ಠೆ ಮೆರೆದಿದ್ದ ಪಂಜಾಬ್ ಪೊಲೀಸ್‍ಅಕಾರಿ ಕೈಯನ್ನು ನಿಹಾಂಗ್ ಧಾರ್ಮಿಕ ಗುಂಪಿಗೆ ಸೇರಿದ ಕೆಲ ದುಷ್ಕರ್ಮಿಗಳು ಕತ್ತರಿಸಿದ್ದು ಗೊತ್ತೇ ಇದೆ. ಆದರೆ ಈಗ ಇವರ ಕೈಯನ್ನು ವೈದ್ಯರು ನಿರಂತರ 7 ತಾಸು ಶಸ್ತ್ರಚಿಕಿತ್ಸೆ ನಡೆಸಿ ಜೋಡಿಸಿದ್ದಾರೆ.

ಆದರೆ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆಯೋ, ಇಲ್ಲವೋ ಎಂಬುದು ಮುಂದಿನ 48 ಗಂಟೆ ನಂತರ ತಿಳಿದುಬರಲಿದೆ ಎಂದು ವೈದ್ಯರು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಲಾಗಿರುವ ಕೈ ಜೀವಂತವಾಗಿರುವುದು ಅತ್ಯಗತ್ಯ. ಏಕೆಂದರೆ ಕೈ ಮಾಂಸಖಂಡಗಳು ಮರುಜೋಡಣೆಯಾಗಲಿ ಎಂದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ ಮಾಂಸಖಂಡಗಳು ನಾವು ಅಂದುಕೊಂಡಂತೆ ಸರಿ ಹೋಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದ್ದು, ಈಗಲೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂಬುದರ ಆಚರಣೆ ಬೇಡವಾಗಿದೆ. ಆದರೂ ಕೈ ಮರುಜೋಡಣೆಯಾಗುವ ಶೇ.90ರಷ್ಟು ಅವಕಾಶವಿದೆ ಎಂದು ಪ್ಲಾಸ್ಟಿಕ್ ಸರ್ಜರಿ ವೈದ್ಯ ಆರ್.ಕೆ. ಶರ್ಮಾ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ