ಏರ್ ಇಂಡಿಯಾ ವಿಮಾನ ಮೂಲಕ ಸಾಗಣೆ | ಕೃಷಿ ಉತ್ಪನ್ನ ರಫ್ತು ವಿದೇಶಕ್ಕೆ ಹಣ್ಣು, ತರಕಾರಿ ಸಾಗಣೆ

ಹೊಸದಿಲ್ಲಿ: ರೈತರು ಬೆಳೆದಿರುವ ಕೃಷಿ ಪದಾರ್ಥಗಳನ್ನು ವಿದೇಶಕ್ಕೆ ರಫ್ತು ಮಾಡಲು ನೆರವಾಗುವ ಕೇಂದ್ರ ಸರ್ಕಾರದ ಕೃಷಿ ಉಡಾನ್‍ಯೋಜನೆ ಅನ್ವಯ ಏರ್ ಇಂಡಿಯಾದ 2 ವಿಮಾನಗಳು ಹಣ್ಣು ಹಾಗೂ ತರಕಾರಿಯನ್ನು ಲಂಡನ್ ಹಾಗೂ ಜರ್ಮನಿಯ ಫ್ರಾಂಕ್‍ಫರ್ಟ್‍ಗೆ ಸಾಗಿಸುತ್ತಿದೆ.

ಕೃಷಿ ಉಡಾನ್ ಯೋಜನೆ ಅನ್ವಯ ಏಪ್ರಿಲ್ 13ಕ್ಕೆ ಲಂಡನ್ ಹಾಗೂ ಏಪ್ರಿಲ್ 15ಕ್ಕೆ ಜರ್ಮನಿಯ ಫ್ರಾಂಕ್‍ಫರ್ಟ್‍ಗೆ ಏರ್‍ಇಂಡಿಯಾ ಹಾರಾಟ ನಡೆಸಲಿದೆ.

ಎರಡೂ ವಿಮಾನಗಳು ದೇಶದ ರೈತರು ಬೆಳೆದಿರುವ ತರಕಾರಿ ಹಾಗೂ ಹಣ್ಣುಗಳನ್ನು ಕೊಂಡೊಯ್ಯುತ್ತಿದೆ ಎಂದು ಸರ್ಕಾರಿ ಅಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ವಿಮಾನಗಳು ಹಿಂದಿರುಗುತ್ತಾ, ಲಂಡನ್ ಮತ್ತು ಫ್ರಾಂಕ್‍ಫರ್ಟ್‍ನಿಂದ ಅಗತ್ಯ ವೈದ್ಯಕೀಯ ಔಷ ಹಾಗೂ ಉಪಕರಣಗಳನ್ನು ತರಲಿವೆ ಎಂದೂ ಮಾಹಿತಿ ನೀಡಿದ್ದಾರೆ.

ತಾವು ಬೆಳೆದಿರುವ ಕೃಷಿ ಪದಾರ್ಥಗಳನ್ನು ವಿದೇಶಕ್ಕೆ ರಫ್ತು ಮಾಡಲು ರೈತರಿಗೆ ಸಹಾಯವಾಗಲಿ ಎಂದು ಸರ್ಕಾರ ಕೃಷಿ ಉಡಾನ್‍ಯೋಜನೆ ಆರಂಭಿಸಿತ್ತು. ಈ ಮೂಲಕ ನೇರವಾಗಿ ವಿದೇಶಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಿಕೊಡಲಾಗುತ್ತಿದ್ದು, ಆಮದು ಹಾಗೂ ರಫ್ತು ಎರಡು ಹಿತದೃಷ್ಟಿಯಿಂದಲೂ ರೈತರಿಗೆ ಯೋಜನೆಯಿಂದ ಲಾಭವಾಗಲಿದೆ ಎಂದು ಅಕಾರಿ ಹೇಳಿದ್ದಾರೆ.

ಇನ್ನು ಏಪ್ರಿಲ್ 4ರಿಂದಲೂ ಅಗತ್ಯ ಔಷ, ವೈದ್ಯಕೀಯ ಉಪಕರಣವನ್ನು ರಫ್ತು ಮಾಡಲು ಚೀನಾದೊಂದಿಗೆ ಕೇಂದ್ರ ಸರ್ಕಾರ ವಾಯು ಸೇತು ಸಂಪರ್ಕ ನಿರ್ಮಿಸಿದೆ. ಚೀನಾದ ಶಾಂಘೈನಿಂದ ಏರ್‍ಇಂಡಿಯಾ ಎಐ 349 ವಿಮಾನ ಶನಿವಾರ ಬೆಳಗ್ಗೆ ಮುಂಬೈಗೆ ಬಂದಿಳಿದಿದೆ. ಶಾಂಘೈನಿಂದ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಅಗತ್ಯದ ಪ್ರಕಾರ ವಿವಿಧ ರಾಜ್ಯಗಳಿಗೆ ವಿತರಿಸಲಾಗುವುದು ಎಂದು ಅಕಾರಿ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಕೊರೋನಾ ಹರಡಿದಾಗಲಿಂದಲೂ ಏರ್‍ಇಂಡಿಯಾ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೂ ಸುಮಾರು 119 ವಿಮಾನಗಳು ಹೊರದೇಶಗಳಿಂದ ಅಗತ್ಯ ವೈದ್ಯಕೀಯ ನೆರವು ಆಮದು ಮಾಡಿಕೊಳ್ಳಲು ಹಾಗೂ ವಿವಿಧೆಡೆ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ವಾಪಸ್ ಕರೆತರಲು ಬಳಕೆಯಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ