ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿದ ಮೋದಿ

ದೇಶಾದ್ಯಂತ ಲಾಕ್‍ಡೌನ್ ಮುಂದುವರಿಸುವ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿದ್ದಾರೆ.

ಬಿಳಿಯ ವರ್ಣದ ಶಾಲ್‍ಅನ್ನು ಮೋದಿ ಮಾಸ್ಕ್‍ನಂತೆ ಧರಿಸಿ ಗಮನಸೆಳೆದಿದ್ದಾರೆ. ಈ ಬೆನ್ನಲ್ಲೇ ರೈಲ್ವೆ ಸಚಿವ ಪಿಯೂಶ್‍ಗೋಯಲ್ ದೇಶದ ಪ್ರತಿಯೊಬ್ಬರು ಪ್ರಧಾನಿಯ ಹಾಗೆ ಮನೆಯಲ್ಲೇ ತಯಾರಿಸಲಾದ ಮಾಸ್ಕ್‍ಧರಿಸುವಂತೆ ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ಮನೆಯಲ್ಲಿ ತಯಾರಿಸಲಾದ ಮಾಸ್ಕ್ ಧರಿಸಿ, ಮಾದರಿಯಾಗಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಹೀಗೆ ಮಾಸ್ಕ್ ಧರಿಸಿ, ತಮ್ಮನ್ನು ಹಾಗೂ ತಮ್ಮ ಸುತ್ತಮುತ್ತಲಿನವರನ್ನು ರಕ್ಷಿಸೋಣ ಎಂದು ಟ್ವೀಟ್ ಕೂಡ ಮಾಡಿದ್ದಾರೆ.

ಇನ್ನು ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲ ಮುಖ್ಯಮಂತ್ರಿಗಳೂ ಮಾಸ್ಕ್ ಧರಿಸಿದ್ದರು. ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾರಾಷ್ಟ್ರ ಮುಖ್ಯಮಂತ್ರಿಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ್, ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗಿಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ