ಶಲ್ಯವನ್ನೇ ಮಾಸ್ಕ್ ಮಾಡಿಕೊಂಡ ಮೋದಿ; ಸಿಎಂಗಳೊಂದಿಗಿನ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಪ್ರಧಾನಿ ಜಾಗೃತಿ ಸಂದೇಶ

ಬೆಂಗಳೂರು: ದೇಶವ್ಯಾಪಿ ಕೊರೋನಾ ಸೋಂಕಿನ ಪರಿಸ್ಥಿತಿ ಹಾಗು ಅದನ್ನು ನಿಭಾಯಿಸಲು ಕೈಗೊಳ್ಳಲಾಗಿರುವ ಕ್ರಮಗಳನ್ನು ಅವಲೋಕಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫೆರೆನ್ಸ್ ನಡೆಸಿದ್ದಾರೆ. ರಾಜ್ಯ ಸಿಎಂ ಯಡಿಯೂರಪ್ಪ ಕೂಡ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಏಪ್ರಿಲ್ 14 ನಂತರವೂ ಲಾಕ್ ಡೌನ್ ವಿಸ್ತರಿಸುವ ಕುರಿತು ಸಂದರ್ಭದಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ.

ಪ್ರಧಾನಿ ಮೋದಿ ಅವರು ಮಾಸ್ಕ್ ಧರಿಸಿಕೊಂಡೇ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು. ಗಮನಾರ್ಹದ ಸಂಗತಿ ಎಂದರೆ ಪ್ರಧಾನಿಗಳು ಮನೆಯಲ್ಲೇ ಮಾಡಿದ ಮಾಸ್ಕ್ ಅನ್ನು ಧರಿಸಿದ್ದರು. ಈ ಮೂಲಕ ಜನರಿಗೂ ಮಾಸ್ಕ್ ಕುರಿತು ಜಾಗೃತಿ ಸಂದೇಶ ಮೂಡಿಸಿದ್ಧಾರೆ.

ಮೋದಿ ಜೊತೆಗಿನ ವಿಡಿಯೋ ಸಂವಾದದಲ್ಲಿ ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನದವರೆಗೂ ಈ ವಿಸಿ ಮುಂದುವರಿಯುವ ಸಾಧ್ಯತೆ ಇದೆ.

ಪಿಎಂ ಜೊತೆಗಿನ ಈ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರಿದ್ಧಾರೆ.

ಈ ಸಂವಾದಕ್ಕೆ ಮುನ್ನ ಪೂರ್ವತಯಾರಿಯಾಗಿ ಸಿಎಂ ಯಡಿಯೂರಪ್ಪ ಅವರು ಸಭೆ ನಡೆಸಿ ಸಮಾಲೋಚನೆ ಮಾಡಿದರು. ಶ್ರೀರಾಮುಲು, ಬೊಮ್ಮಾಯಿ, ಸುಧಾಕರ್, ಸುರೇಶ್ ಕುಮಾರ್ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ