ಲಾಕ್‍ಡೌನ್ ಖಚಿತ, ಆದೇಶ ಬಾಕಿ

ಹೊಸದಿಲ್ಲಿ: ನಿರೀಕ್ಷೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಲಾಕ್‍ಡೌನ್ ಮುಂದುವರಿಸಬೇಕು ಎಂದು ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ. ಅದರಂತೆ, ಲಾಕ್‍ಡೌನ್ ವಿಸ್ತರಣೆಗೆ ಮೋದಿ ಸಹ ನಿಲುವು ಹೊಂದಿದ್ದು, ಅಕೃತ ಆದೇಶವೊಂದೇ ಬಾಕಿ ಉಳಿದಿದೆ.

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನರೆನ್ಸ್ ಮಾಡಿದ ಬಳಿಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಲಾಕ್‍ಡೌನ್‍ಗೆ ಮೋದಿ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಧಾನಿ ನಿರ್ಧಾರಕ್ಕೆ ನಾವು ಬದ್ಧ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಹೇಳಿದ್ದಾರೆ. ಆದಾಗ್ಯೂ, ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‍ಡೌನ್ ವಿಸ್ತರಣೆಗೆ ಒಲವು ಹೊಂದಿದ್ದು, ಪರಿಗಣಿಸುತ್ತೇವೆ ಎಂದು ಕೇಂದ್ರ ಸರ್ಕಾರವೇ ತಿಳಿಸಿದೆ. ಹಾಗಾಗಿ ದೇಶಾದ್ಯಂತ ಏಪ್ರಿಲ್ 14ರ ಬಳಿಕ ಲಾಕ್‍ಡೌನ್ ವಿಸ್ತರಣೆ ಮಾಡುವುದು ಖಚಿತವಾಗಿದೆ.

ವೀಡಿಯೋ ಕಾನರೆನ್ಸ್‍ನಲ್ಲಿ ಮೋದಿ ಅವರು, ಲಾಕ್‍ಡೌನ್ ಪಾಲನೆ, ಜನಜೀವನಕ್ಕೆ ಹಾನಿ ಆಗದಿರುವುದು, ಎಲ್ಲ ಸೌಲಭ್ಯ ನೀಡುವುದು, ವೈದ್ಯಕೀಯ ಸೌಲಭ್ಯ ಹೆಚ್ಚಿಸುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದರಲ್ಲೂ ನಿಮ್ಮ ಜತೆ ಕೇಂದ್ರ ಸರ್ಕಾರ ದಿನದ 24 ಗಂಟೆಯೂ ಇರುತ್ತದೆ, ನಾನಿದ್ದೇನೆ ಎಂಬ ಅಭಯ ನೀಡಿರುವುದು ರಾಜ್ಯಗಳ ವಿಶ್ವಾಸ ಇಮ್ಮಡಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ