ಕೊರೋನಾ: 5 ಸಾವಿರ ದಿನಗೂಲಿಗಳಿಗೆ ಝೀ ಸಮೂಹದಿಂದ ಹಣಕಾಸು ನೆರವು

ಮಂಗಳೂರು: ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಕೊರೋನಾ ವೈರಸ್ ಸೋಂಕಿನ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿರುವ ಝೀ ಎಂಟರ್‍ಟೈನ್‍ಮೆಂಟ್ ಎಂಟರ್‍ಪ್ರೈಸಸ್ ಲಿಮಿಟೆಡ್ (ಝೆಡ್‍ಇಇ), ಕಂಪನಿಯ ಒಟ್ಟಾರೆ ನಿರ್ಮಾಣ ವ್ಯವಸ್ಥೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿನೆರವಾಗಿರುವ 5000ಕ್ಕೂ ಹೆಚ್ಚು ಮಂದಿ ದಿನಗೂಲಿಗಳಿಗೆ ಹಣಕಾಸು ನೆರವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ಲಾಕ್‍ಡೌನ್‍ನಿಂದ ದಿನಗೂಲಿ ನೌಕರರ ಮೇಲೆ ಉಂಟಾಗಿರುವ ಪರಿಣಾಮದ ತೀವ್ರತೆ ಅವರ ಕುಟುಂಬಗಳಿಗೆ ತಟ್ಟಬಾರದು ಎಂಬ ಉದ್ದೇಶದಿಂದ ಈ ಕ್ರಮಕೈಗೊಂಡಿದೆ.

ಅಂತೆಯೇ ಕೊರೋನಾ ವಿರುದ್ಧದ ಸಮರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಪಿಎಂ ಕೇರ್ಸ್ ನಿಗೆ ವೀಕ್ಷಕರು ಉದಾರವಾಗಿ ದೇಣಿಗೆ ನೀಡಬೇಕು ಎಂದು ಮನವಿ ಮಾಡುವ ಜತೆಗೆ ತನ್ನ ಎಲ್ಲ 3500 ಮಂದಿ ಸಿಬ್ಬಂದಿಯ ವೈಯಕ್ತಿಕ ದೇಣಿಗೆಯನ್ನು ಕ್ರೋಢೀಕರಿಸಿ, ನಿಗೆ ದೇಣಿಗೆಯಾಗಿ ನೀಡುವುದಾಗಿ ಝೀ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಹಣಾಕಾರಿ ಪುನೀತ್ ಗೋಯೆಂಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಹಣಕಾಸು ನೆರವಿನ ಜತೆಗೆ, ಈ ಪವಿತ್ರಕಾರ್ಯದ ಬಗ್ಗೆ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸುವಲ್ಲಿ ಕೂಡಾ ನಮ್ಮ ಕೊಡುಗೆ ನೀಡಲಿದ್ದೇವೆ.

ವೀಕ್ಷಕರಿಗೆ ಸುರಕ್ಷೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿಸುವ ನಿಟ್ಟಿನಲ್ಲಿ ವಿನೂತನವಾದ ಬ್ರೇಕ್‍ದ ಕೊರೋನಾ ಔಟ್‍ಬ್ರೇಕ್‍ಉಪಕ್ರಮವನ್ನು ಜಾರಿಗೊಳಿಸಿದೆ. ಈ ವಿನೂತನಕ್ರಮದಡಿ, 40ಕ್ಕೂ ಹೆಚ್ಚು ಚಾನಲ್‍ಗಳಲ್ಲಿ ವಿಷಯಗಳನ್ನು ಇಡೀ ದಿನ 30 ಸೆಕೆಂಡ್‍ಗಳ ಕಾಲ ಸ್ಥಗಿತಗೊಳಿಸಿ, ತಾತ್ಕಾಲಿಕ ವಿರಾಮ ನೀಡುವ ಮೂಲಕ ವೀಕ್ಷಕರು ತಮ್ಮ ಕೈಗಳನ್ನು ತೊಳೆದುಕೊಳ್ಳಲು ಉತ್ತೇಜಿಸುತ್ತದೆ ಎಂದು ವಿವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ