ಬಾಡೂಟದಲ್ಲಿ ತೊಡಗಿದ ಯುವಕರು : ನಿಷೇಧಾಜ್ಞೆ ಉಲ್ಲಂಘಿಸಿದ ಐವರ ಬಂಧನ

ಧಾರವಾಡ: ಕೊರೋನಾ ಸೋಂಕು ತಡೆಗಾಗಿ ಜಿಲ್ಲೆಯಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆ ಉಲ್ಲಂಘಿಸಿ ಗೆಳೆಯನ ಜನ್ಮದಿನ ಆಚರಣೆಯೊಂದಿಗೆ ಬಾಡೂಟದಲ್ಲಿ ತೊಡಗಿದ್ದ ಐವರು ಯುವಕರನ್ನು ಗುರುವಾರ ಬಾರ್ ಇಮಾಮ್ ಗಲ್ಲಿಯಲ್ಲಿ ಬಂಧಿಸಿದ್ದಾರೆ.

ಬಾರ್ ಇಮಾಮ್ ಗಲ್ಲಿಯ ಇರ್ಫಾನ್ ಬೆಳಗಾಂವಕರ್(31), ಮಣಿಕಂಠ ನಗರದ ಆಸ್ಪಾಕ್ ಗೋಡಿ(35), ಜಮಾದಾರ ಗಲ್ಲಿಯ ವಾಸೀಂ ಬಾಂದಾರ(18), ಮಣಿಕಿಲ್ಲಾದ ಅರ್ಬಾಜ್ ಪಠಾಣ(18) ಹಾಗೂ ಅಸ್ಲಂ ಹುಬ್ಬಳ್ಳಿಕರ ಬಂತ ಯುವಕರು.

ಬಾರ್ ಇಮಾಮ್ ಗಲ್ಲಿಯ ಹತ್ತಿರದ ಬೆಳಗಾಂವಕರ ಮನೆಯ ಮುಂದಿನ ಖುಲ್ಲಾ ಜಾಗೆಯಲ್ಲಿ ಗೆಳಯನ ಜನ್ಮದಿನದ ಪ್ರಯುಕ್ತ 10 ಸೇರಿಕೊಂಡು ಮಟನ್ ಬಿರಯಾನಿ ತಯಾರಿಸಿ ಬಾಡೂಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿಯೊಂದಿಗೆ ಪೊಲೀಸರು ದಾಳಿ ನಡೆಸಿ ಯುವಕರನ್ನು ಬಂಸಿದ್ದಾರೆ.

ಕೋವಿಡ್-19 ತಡೆಗೆ ನಿಷೇಧಾಜ್ಞೆ ಹಾಗೂ ಗುಂಪಾಗಿ ಜನರು ಸೇರುವುದರಿಂದ ಸೋಂಕು ಹರಡುವುದು ಗೋತ್ತಿದ್ದರೂ, ನಿಷೇಧಾಜ್ಞೆ ಉಲ್ಲಂಘಸಿ ಬಾಡೂಟದಲ್ಲಿ ತೋಡಗಿದ್ದ ಬಂತರ ವಿರುದ್ಧ ಕಲಂ 188, 269, 270ಅಡಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಲೇ, ಬಾಡೂಟಕ್ಕೆ ಬಳಿಸಿ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಇನ್ನೂ ಆಲಂ, ತನ್ವೀರ್ ಅಲಿಯಾಸ್ ತನು, ಮಲಿಕ್, ಇರ್ಷಾದ್ ಹಾಗೂ ಶಮಿವುಲ್ಲಾ ಬಳ್ಳಾರಿ ಪರಾರಿಯಾಗಿದ್ದು, ಇವರಗೆ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ