ಕೊರೋನಾ ಅಟ್ಟಹಾಸದ ನಡುವೆ ಧಾರ್ಮಿಕ ತಾರತಮ್ಯ: ಹಿಂದೂ, ಕ್ರಿಶ್ಚಿಯನ್ನರಿಗೆ ಆಹಾರ ಸಾಮಗ್ರಿ ಕೊಡಲ್ಲ ಎಂದ ಪಾಕಿಸ್ತಾನ!

ಕರಾಚಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜಗತ್ತು ಒಗ್ಗಟ್ಟಾಗಿದೆ. ಆದರೆ ಪಾಪಿ ಪಾಕಿಸ್ತಾನ ಮಾತ್ರ  ಈ ಜಾಗತಿಕ ಬಿಕ್ಕಟ್ಟಿನ ನಡುವೆಯೂ  ಧಾರ್ಮಿಕ ತಾರತಮ್ಯ ಮಾಡುತ್ತಿರುವುದು ಪತ್ತೆಯಾಗಿದೆ! ಪಾಕಿಸ್ತಾನದಲ್ಲಿರುವ ಹಿಂದೂಗಳು,  ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಅಧಿಕಾರಿಗಳು ಆಹಾರ ಸಾಮಗ್ರಿಗಳನ್ನು ನೀಡದೆ ತಾರತಮ್ಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನಮ್ಮಲ್ಲಿರುವ ಆಹಾರ ಸಾಮಗ್ರಿಗಳು ಮುಸ್ಲಿಮರಿಗಾಗಿ ಇದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಮಾರಕ ಕೊರೋನಾ ಸೋಂಕಿತರ ಸಂಖ್ಯೆ  1,900 ದಾಟಿದೆ.

“ಲಾಕ್ ಡೌನ್ ಸಮಯದಲ್ಲಿ ಅಧಿಕಾರಿಗಳು ನಮಗೆ ಸಹಾಯ ಮಾಡುತ್ತಿಲ್ಲ, ನಾವು ಅಲ್ಪಸಂಖ್ಯಾತ ಸಮುದಾಯದ ಭಾಗವಾಗಿರುವ ಕಾರಣ ಪಡಿತರವನ್ನು ಸಹ ನಮಗೆ ನೀಡುತ್ತಿಲ್ಲ” ಎಂದು ಹಿಂದೂ ವ್ಯಕ್ತಿಯೊಬ್ಬರು ವಿಷಾದದಿಂದ ಹೇಳಿದ್ದಾರೆ.

ಕೊರೋನಾವೈರಸ್ ಹರಡುವುದನ್ನು ತಡೆಯಲು ಅಂಗಡಿಗಳು ಮುಚ್ಚಿರುವುದರಿಂದ ಜನರು ರಾಚಿಯ ರೆಹ್ರಿ ಘೋತ್‌ನಲ್ಲಿ ಆಹಾರ ಸರಬರಾಜು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಪಡೆಯಲು ಸೇರುತ್ತಾರೆ. ಆದರೆ  ಅಧಿಕಾರಿಗಳು ಹಿಂದೂ ಸಮುದಾಯಕ್ಕೆ ಸೇರಿದವರು  ಹಿಂದಕ್ಕೆ ಹೋಗಬೇಕೆಂದು ಹೇಳುತ್ತಾರೆ.ಏಕೆಂದರೆ ಪಡಿತರ ವಿತರಣೆ ಏನಿದ್ದರೂ ಅದು  ಮುಸ್ಲಿಮರಿಗೆ ಮಾತ್ರ!

“ನಮ್ಮ ನೆರೆಹೊರೆಯ ಜನರು ಅಗತ್ಯ ವಸ್ತುಗಳನ್ನು ಪಡೆಯುತ್ತಿದ್ದಾರೆ  ಆದರೆ ನಾವು ಮಾತ್ರ ಬವಣೆ ಪಡುತ್ತಿದ್ದೇವೆ. ನನ್ನ ಮಗ ರಿಕ್ಷಾವನ್ನು ಓಡಿಸುತ್ತಾನೆ. ಲಾಕ್‌ಡೌನ್ ಕಾರಣ, ಎಲ್ಲಾ ಸೇವೆಗಳು ಅಮಾನತುಗೊಂಡಿದ್ದು ಆತ ಮನೆಯಲ್ಲೇ ಕುಳಿತಿದ್ದಾನೆ. ನಮಗೆ ತಿನ್ನಲು ಏನೂ ಇಲ್ಲ. ನಮ್ಮ ಬಳಿ ಹಣವಿಲ್ಲ. ನಾವು ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿದಾಗಲೂ, ಅಧಿಕಾರಿಗಳು ಅಗತ್ಯ ವಸ್ತುಗಳನ್ನು ಪ್ರತ್ಯೇಕ ಟ್ರಕ್‌ಗಳಲ್ಲಿ ಕಳುಹಿಸುತ್ತೇವೆ ಎಂದು ಭರವಸೆ ನೀಡುತ್ತಾರೆ ಆದರೆ ಅಂತಿಮವಾಗಿ ಅವರು ಹಾಗೆ ಮಾಡುವುದಿಲ್ಲ , “ಎಂದು ಕರಾಚಿಯ ಹಿಂದೂ ಸಮುದಾಯದ ಮತ್ತೊಬ್ಬ ಸದಸ್ಯ ಹೇಳಿದರು.

ಪಾಕಿಸ್ತಾನದ ಹಿಂದೂಗಳು ದೇಶದ ಜನಸಂಖ್ಯೆಯ ಶೇಕಡಾ 4 ರಷ್ಟಿದ್ದಾರೆ. ಈ ಸಮುದಾಯವು ಸರ್ಕಾರದಿಂದ ಅತಿಯಾದ ತಾರತಮ್ಯಕ್ಕೆ ಒಳಗಾಗುತ್ತಿದೆ.  ಅನೇಕವೇಳೆ ಮೂಲಭೂತ ಮಾನವ ಹಕ್ಕುಗಳಿಂದಲೂ ವಂಚಿತವಾಗುತ್ತಿದೆ..

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ