ರಾಜ್ಯದಲ್ಲಿ 13ಕ್ಕೇರಿದ ಸೋಂಕು ಪೀಡಿತರ ಸಂಖ್ಯೆ

ಬೆಂಗಳೂರು, ಮಾ.18- ವಿದೇಶದಿಂದ ಆಗಮಿಸಿದ್ದ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 13ಕ್ಕೇರಿದೆ.

ಅಮೆರಿಕಾದಿಂದ ಬಂದ 56 ವರ್ಷದ ವ್ಯಕ್ತಿ ಮತ್ತು ಸ್ಪೇನ್‍ನಿಂದ ಆಗಮಿಸಿದ 25 ವರ್ಷದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಇಬ್ಬರನ್ನು ತಪಾಸಣೆಗೆ ಒಳಪಡಿಸಿದಾಗ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತು.

ಇವರಿಬ್ಬರನ್ನು ಪ್ರತ್ಯೇಕ ಘಟಕದಲ್ಲಿ ಮುಂದಿನ ತಪಾಸಣೆ ಮತ್ತು ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಖಚಿತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ