ಯೆಸ್ ಬ್ಯಾಂಕ್ ಬಿಕ್ಕುಟ್ಟು: 24 ಗಂಟೆಗಳ ಬಳಿಕ ಮರಳಿ ಸೇವೆ ಆರಂಭಿಸಿದ ಫೋನ್ ಪೇ

ನವದೆಹಲಿ: ಖಾಸಗಿ ಕ್ಷೇತ್ದ ಯೆಸ್​ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ ಬೆನ್ನಲ್ಲೇ ಸ್ಥಗಿತವಾಗಿದ್ದ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆ ಫೋನ್ ಪೇ ಸೇವೆ 24 ಗಂಟೆಗಳ ಬಳಿಕ ಮರಳಿ ಆರಂಭವಾಗಿದೆ.

ಹೌದು.. ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನ ಬೆನ್ನಲ್ಲೇ ಸ್ಥಗಿತವಾಗಿದ್ದ ಫೋನ್ ಪೇ ಸೇವೆ ಮರಳಿ ಆರಂಭವಾಗಿದ್ದು, ಆ ಮೂಲಕ ಫೋನ್ ಪೇ ಗ್ರಾಹಕರು ನಿರಾಳರಾಗಿದ್ದಾರೆ. ಈ ಕುರಿತಂತೆ ತನ್ನ ಟ್ವಿಟರ್ ಖಾತೆಯಲ್ಲಿ ಪೋನ್ ಪೇ ಸಂಸ್ಥೆ ಕೂಡ ಟ್ವೀಟ್ ಮಾಡಿದ್ದು, ನಾವು ಮರಳಿ ವಾಪಸ್ ಆಗಿದ್ದು, 15 ಮಿಲಿಯನ್ ಗಿಂತಲೂ ಹೆಚ್ಚಿನ ಬಳಕೆದಾರರು ಫೋನ್ ಪೇ ಬಳಕೆ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.

ಅಂತೆಯೇ ಈ ಹಿಂದೆ ಯೆಸ್ ಬ್ಯಾಂಕ್ ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಫೋನ್ ಪೇ ಬದಲಿಸಿದ್ದು, ಹೊಸದಾಗಿ ಐಸಿಐಸಿಐ ಬ್ಯಾಂಕ್ ನೊಂದಿಗೆ ವಹಿವಾಟು ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಇನ್ನು ಮುಂದೆ ನಮ್ಮ ಸೇವೆಯಲ್ಲಿ ಯಾವುದೇ ರೀತಿಯ ಅಡಚಣೆ ಇರುವುದಿಲ್ಲ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನಾವು ವಂದನೆ ಹೇಳುತ್ತೇವೆ. ಕಷ್ಟದಲ್ಲಿ ಪ್ರತಿಕ್ರಿಯಿಸಿದ ಸ್ನೇಹಿತ ಸಂಸ್ಥೆ ಐಸಿಐಸಿಐಗೆ ನಾವು ಧನ್ಯವಾದ ಹೇಳುತ್ತೇವೆ ಎಂದು ಫೋನ್ ಪೇ ಟ್ವೀಟ್ ಮಾಡಿದೆ.

ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸದಂತೆ ಆರ್ ಬಿಐ ಸಂಸ್ಥೆಯ ಆಡಳಿತ ಮಂಡಳಿಯನ್ನು ಸೂಪರ್ ಸೀಡ್, ಆಡಳಿತ ಮಂಡಳಯನ್ನು ವಜಾ ಮಾಡಿತ್ತು. ಅಲ್ಲದೆ ಬ್ಯಾಂಕ್ ನಿರ್ವಹಣೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಯೆಸ್ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಪೋನ್ ಪೇ ಸೇವೆ ಕೂಡ ಸ್ಥಗಿತಗೊಂಡಿತ್ತು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ