ಸಬರಮತಿ ಆಶ್ರಮದಲ್ಲಿ ಗಾಂಧಿಗೆ ನಮಿಸಿ,ಚರಕ ವೀಕ್ಷಿಸಿದ ಟ್ರಂಪ್ ದಂಪತಿ!

ಅಹಮದಾಬಾದ್ : ಸಬರಮತಿ ಆಶ್ರಮಕ್ಕೆ ತೆರಳಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮೊದಲ ಮಹಿಳೆ ಮೆಲಾನಿಯಾ ಟ್ರಂಪ್  ಮತ್ತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

ಗಾಂಧೀಜಿ  ಅವರ ಸ್ವದೇಶಿ ಚಳವಳಿಯ ಪ್ರಮುಖ ಸಾಧನವಾಗಿದ್ದ ಚರಕದ ಮಹತ್ವವನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು. ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಚರಕದ ಬಳಿ ಕುಳಿತು ಅದರ ಕಾರ್ಯಗಳ ಬಗ್ಗೆ ತಿಳಿದುಕೊಂಡರು.

ಸಬರಮತಿ ಆಶ್ರಮದಲ್ಲಿನ ಸಂದರ್ಶಕರ ಪುಸ್ತಕದಲ್ಲಿ , ಸ್ನೇಹಿತ ನರೇಂದ್ರ ಮೋದಿಗೆ ವಂದನೆಗಳು, ಅದ್ಬುತ ಭೇಟಿಯಾಗಿದೆ ಎಂದು ಸಹಿ ಹಾಕಿದ್ದಾರೆ. ನಂತರ ಮೊಟೆರಾ ಕ್ರೀಡಾಂಗಣದತ್ತ ತೆರಳಿದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ