ಸಚಿವರುಗಳಿಗೆ ಮೊದಲು ಪಡೆದ ಖಾತೆ ಇಷ್ಟವಿರಲಿಲ್ಲ, ಅದಕ್ಕೆ ಬದಲಾವಣೆ: ಅಶ್ವತ್ಥ್ ನಾರಾಯಣ

ಶಿವಮೊಗ್ಗ: ನೂತನ ಸಚಿವರುಗಳಿಗೆ ಮೊದಲು ನೀಡಿದ್ದ ಖಾತೆಗಳು ಅವರಿಗೆ ಇಷ್ಟವಿಲ್ಲದ ಕಾರಣ ನಂತರ ಬದಲಾಯಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮೊದಲು ಖಾತೆ ಪಡೆದ ಸಚಿವರು ಆ ಖಾತೆಗಳು ಇಷ್ಟವಿಲ್ಲ ಎಂದು ಸಿಎಂ ಗಮನಕ್ಕೆ ತಂದಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾತೆಗಳನ್ನು ಬದಲಾಯಿಸಿ ಕೊಟ್ಟಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆಯಿಲ್ಲ. ಎಲ್ಲರೂ ತೃಪ್ತಿಕರವಾಗಿದ್ದಾರೆ ಎಂದರು.

ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಸಿಎಂ ಯಶಸ್ವಿಯಾಗಿ ಮಾಡಿದ್ದಾರೆ. ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ. ಈಗ ಆಗಿರುವ ಬಗ್ಗೆ ಗಮನ ಹರಿಸೋಣ. ಮುಖ್ಯಮಂತ್ರಿಗಳ ಸೂಕ್ತ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಾರೆ. ಸೋತವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಶಿವಮೊಗ್ಗದ ನೆನಪುಗಳ ಬಗ್ಗೆ ಮಾತನಾಡಿದ ಡಿಸಿಎಂ, ಶಿವಮೊಗ್ಗಕ್ಕೂ ಹಾಗೂ ನನಗೂ ತುಂಬಾ ಹಳೆಯ ನಂಟಿದೆ. ಪ್ರೌಢಶಾಲೆ ಹಾಗೂ ಪಿಯುಸಿಯನ್ನು ಇಲ್ಲೇ ಓದಿದ್ದರಿಂದ ಒಂದು ವಿಶೇಷ ಒಲವಿದೆ ಎಂದರು. ಜಿಲ್ಲೆಯನ್ನು ಹೆಚ್ಚು ಅಭಿವೃದ್ಧಿ ಮಾಡಬೇಕೆಂಬ ಕನಸನ್ನು ಬಿಎಸ್ವೈ ಹೊಂದಿದ್ದಾರೆ. ಈ ಹಿಂದೆ ಕೂಡ ಮುಖ್ಯಮಂತ್ರಿ ಯಾಗಿದ್ದಾಗ ಕೂಡ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಶಿಕ್ಷಣ ಮತ್ತು ಕೌಶಲ್ಯವಿದ್ದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಅದಕ್ಕಾಗಿಯೇ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಹೆಚ್ಚಿನ ಒತ್ತು ನೀಡಲಾಗ್ತಿದೆ ಎಂದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ