ಆರ್ಥಿಕ ಸಮೀಕ್ಷೆ ವರದಿ ಮಂಡನೆ: ಬೆಳವಣಿಗೆ ದರ ಮುಂದಿನ ವರ್ಷ 6-6.5% ಏರಿಕೆ ನಿರೀಕ್ಷೆ

ಹೊಸದಿಲ್ಲಿ: ಹಣಕಾಸು ಸಚಿವೆ ಸಂಸತ್‌ನಲ್ಲಿ ಮಹತ್ವದ ಹಣಕಾಸು ಸಮೀಕ್ಷೆ ವರದಿಯನ್ನು ಮಂಡಿಸಿದರು.

ಸಮೀಕ್ಷೆಯಲ್ಲಿ ಪ್ರಮುಖವಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣಿಗೆ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಏಪ್ರಿಲ್‌ 1, 2020 ರಿಂದ ಆರಂಭವಾಗಲಿರುವ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟಾರೆ ಬೆಳವಣಿಗೆ ದರ ಶೇಕಡಾ 6 ರಿಂದ 6.5 ರವರೆಗೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ದೇಶದಲ್ಲಿ ಉದ್ಯಮ ನಡೆಸುವುದನ್ನು ಸುಲಭವಾಗಿಸಲು ಮತ್ತಷ್ಟು ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಪ್ರಸಕ್ತ ವರ್ಷದ ಬೆಳವಣಿಗೆ ದರ ಶೇಕಡಾ 5 ರಷ್ಟು ಇರಬಹುದು ಎಂದು ಆರ್ಥಿಕ ಸಮೀಕ್ಷೆ ಅಂದಾಜು ಮಾಡಿದ್ದು, ಆರ್ಥಿಕ ಬೆಳವಣಿಗೆ ಪುನಶ್ಚೇತನಕ್ಕೆ ವಿತ್ತೀಯ ಕೊರತೆ ಗುರಿಯನ್ನು ಸ್ವಲ್ಪ ಸಡಿಲಗೊಳಿಸಬೇಕಾಗಿದೆ ಎಂದೂ ತಿಳಿಸಿದೆ.
ಬಜೆಟ್‌ಗಿಂತ ಮೊದಲು ಆರ್ಥಿಕ ಸಮೀಕ್ಷೆಯನ್ನು ಸಂಸತ್‌ನಲ್ಲಿ ಮಂಡಿಸಲಾಗುತ್ತದೆ. ಇದು ಹಣಕಾಸು ಇಲಾಖೆಯ ವಾರ್ಷಿಕ ವರದಿ ಎಂದರೂ ತಪ್ಪಲ್ಲ. ಕಳೆದ ಒಂದು ವರ್ಷದಲ್ಲಿ ದೇಶದ ಹಣಕಾಸು ಕ್ಷೇತ್ರ ಸಾಧಿಸಿದ ಸಾಧನೆಗಳ ಚಿತ್ರಣ ಇದರಲ್ಲಿ ದಾಖಲಾಗಿರುತ್ತದೆ.

 

* ದೇಶದ ಅಭಿವೃದ್ಧಿಗೆ ಪುನಶ್ಚೇತನ ನೀಡಲು ಸಮೀಕ್ಷೆ ಒಂದಷ್ಟು ಸಲಹೆಗಳನ್ನು ನೀಡಿದೆ.
* ವಿಶ್ವ ರಾಷ್ಟ್ರಗಳಿಗೆ ಅಗತ್ಯವಿರುವ ವಸ್ತುಗಳನ್ನು ಭಾರತದಲ್ಲೇ ಅಸೆಂಬಲ್ ಮಾಡುವಂತಾಗಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ.
* ಭಾರತೀಯ ಬಂದರುಗಳಲ್ಲಿ ರೆಡ್ ಟೇಪ್ ತಡೆ ನಿವಾರಿಸಬೇಕು. ಅಂದರೆ, ಅಲ್ಲಿಯ ಆಡಳಿತ ವ್ಯವಸ್ಥೆ ಸರಳೀಕೃತಗೊಳಿಸಬೇಕು. ಇದರಿಂದ ರಫ್ತು ಚಟುವಟಿಕೆಗೆ ಉತ್ತೇಜನ ಸಿಗುತ್ತದೆ.* ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ ಆಡಳಿತ ಉತ್ತಮಗೊಳಿಸಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ