ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್ ರದ್ದು: ಜಗನ್ ಸಂಪುಟ ಒಪ್ಪಿಗೆ

ಹೈದ್ರಾಬಾದ್ : ವಿಧಾನ ಪರಿಷತ್ ಅನ್ನೇರದ್ದುಗೊಳಿಸುವ ಮಸೂದೆಗೆ ವೈಸ್ಜಗನ್ಮೋಹನ್ರೆಡ್ಡಿ ನೇತೃತ್ವದ ಸಚಿವ ಸಂಪುಟ ಅಸ್ತು ನೀಡಿದೆ. ಮೇಲ್ಮನೆಯಲ್ಲಿ ಟಿಡಿಪಿ ಸದಸ್ಯರೇ ಹೆಚ್ಚಿರುವುದರಿಂದ ಕೆಲ ಮಹತ್ವಾಕಾಂಕ್ಷಿ ಮಸೂದೆಗಳಿಗೆ ಅಂಗೀಕಾರ ಸಿಗುವುದಿಲ್ಲ ಎಂಬ ಶಂಕೆಯಲ್ಲಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಐತಿಹಾಸಿಕ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.

ವಿಧಾನ ಪರಿಷತ್​ನ 58 ಸ್ಥಾನಗಳಲ್ಲಿ ತೆಲುಗು ದೇಶಂ ಪಕ್ಷ 27 ಸದಸ್ಯರನ್ನು ಹೊಂದಿದೆ.  ಇದರ ಲಾಭಾ ಪಡೆದ ಟಿಡಿಪಿ  ಜಗನ್​ ಸರ್ಕಾರದ ಮಹತ್ವದ ನಿರ್ಣಯಗಳಾದ ರಾಜ್ಯಕ್ಕೆ ಐವರು  ಉಪಮುಖ್ಯಮಂತ್ರಿ ನೇಮಕ, ಮೂರು ರಾಜಧಾನಿಗಳ ನಿರ್ಮಾಣ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್​ ಮಾಧ್ಯಮದಂತಹ ವಿಚಾರದಲ್ಲಿ ಮೇಲ್ಮನೆ ವಿಳಂಬ ನೀತಿ ತೋರಿತು. ಇದಲ್ಲದೇ ಪರಿಶಿಷ್ಠ ಜಾತಿ ಮತ್ತು ಪಂಗಡಗಳಿಗೆ ಪ್ರತ್ಯೇಕ ಆಯೋಗ ರಚನೆಗೆ ಮೇಲ್ಮನೆ ಅನುಮೋದನೆ ನೀಡಿರಲಿಲ್ಲ. ಕಳೆದ ವಾರ ನಡೆದ ಚಳಿಗಾಲದ ಅಧಿವೇಶನದಲ್ಲಿ ಮೂರು ರಾಜಧಾನಿ ನಿರ್ಣಯದ ಮಸೂದೆಗೆ ಮೇಲ್ಮನೆ ಅಂಗೀಕಾರ ನೀಡಲು ವಿಳಂಬ ಮಾಡಿತ್ತು.

ವಿಧಾನಪರಿಷತ್​ ಅನ್ನು ರದ್ದುಗೊಳಿಸುವುದರಿಂದ ಜಗನ್​ ಸರ್ಕಾರ ಕಠಿಣ ನಿರ್ಣಯಗಳನ್ನು ಕೈಗೊಳ್ಳಲು ಸುಲಭವಾಗಲಿದೆ. 175 ಸ್ಥಾನಗಳನ್ನು ಹೊಂದಿರುವ ವಿಧಾನಸಭೆಯಲ್ಲಿ ವೈಎಸ್​ ಜಗನ್​ ಮೋಹನ್​ ಸರ್ಕಾರ 151 ಸದಸ್ಯರನ್ನು ಹೊಂದಿದೆ. ಇದೀಗ ಪರಿಷತ್ ಅನ್ನು ರದ್ದುಗೊಳಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಲಾಗುತ್ತದೆ. ಇಲ್ಲಿ ಅನುಮೋದನೆ ಸಿಕ್ಕರೆ ಈ ಮಸೂದೆಯನ್ನು ಸಂಸತ್​ನ ಅನುಮೋದನೆಗೆ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ.

ಎನ್ಟಿಆರ್ನಡೆಯಲ್ಲಿ ಜಗನ್​:

ಈ ಹಿಂದೆ ಅಖಂಡ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್​ಟಿಆರ್​ ತಮ್ಮ ಅಧಿಕಾರಾವಧಿಯಿದ್ದ 1985ರಲ್ಲಿ ಮೇಲ್ಮನೆಯನ್ನು ರದ್ದು ಮಾಡಿದ್ದರು.

ಮೇಲ್ಮನೆಯಲ್ಲಿ ಬಹುಮತ ಹೊಂದಿದ್ದ ಕಾಂಗ್ರೆಸ್​ ಸರ್ಕಾರ ತಮ್ಮ ಮಸೂದೆಗಳ ಅಂಗೀಕಾರಕ್ಕೆ ತಡೆಯೊಡ್ಡುತ್ತಿದೆ ಎಂಬ ಕಾರಣ ಈ ತೀರ್ಮಾನ ನಡೆಸಿದ್ದರು.

ಇದಾದ ಬಳಿಕ 2007ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ದ್ವಿ ಸದನ ವ್ಯವಸ್ಥೆಯನ್ನು ಮತ್ತೆ ತಂದಿತು. ಇದಕ್ಕೆ ವಿಪಕ್ಷಗಳು ಕೂಡ ಸಹಮತ ನೀಡುವ ಮೂಲಕ ಮೇಲ್ಮನೆ ಪುನಃ ಸ್ಥಾಪನೆಗೆ ಸಹಾಯ ಮಾಡಿದವು. ಇದಾದ ಬಳಿಕ 2014ರಲ್ಲಿ ಅಧಿಕಾರಕ್ಕೆ ಬಂದ ಚಂದ್ರಬಾಬು ನಾಯ್ಡು ಕೂಡ ದ್ವಿ ಸದನ ಹೊಂದಿದ್ದವು.

ಮೇಲ್ಮನೆ ರದ್ದು ಕುರಿತು ಕಳೆದ ವಾರ ನಿರ್ಣಯ ಕೈಗೊಂಡ ಜಗನ್​ ಸರ್ಕಾರ ಈ ಕುರಿತು ಚರ್ಚೆಗೆ ಇಂದು 9ಕ್ಕೆ ಸಚಿವ ಸಂಪುಟ ಸಭೆ ಕರೆದಿತ್ತು. ಸಭೆಯಲ್ಲಿ ಈ ಕುರಿತು ಚರ್ಚಿಸಿ, ಎಲ್ಲಾ ಸಚಿವರು ಇದಕ್ಕೆ ಅನುಮೋದನೆ ಸೂಚಿಸಿದ್ದಾರೆ

ಇನ್ಮುಂದೆ ದೇಶದ  ಐದು ರಾಜ್ಯಗಳಲ್ಲಿ ಮಾತ್ರ ಮೇಲ್ಮನೆ

ಮೇಲ್ಮನೆಯನ್ನು ಪ್ರತಿಯೊಂದು ರಾಜ್ಯ ಸರ್ಕಾರ ಹೊಂದಲೇಬೇಕು ಎಂಬ ನಿಯಮವಿಲ್ಲ. ವಿಧಾನಸಭೆಯಲ್ಲಿ ಶಾಸಕರು ಯಾವುದೇ ನಿರ್ಣಯ ಕೈಗೊಳ್ಳುವಲ್ಲಿ ಎಡವಿದ್ದಲ್ಲಿ ಎಚ್ಚರಿಸುವ ಸದನ ಇದಾಗಿದೆ. ಬುದ್ದಿವಂತ ಸದಸ್ಯರ ಸದನ ಇದಾಗಿದ್ದರೂ ಇದೊಂದು ನಿರರ್ಥಕ ಸದನ ಎಂಬ ಟೀಕೆ ಕೂಡ ಇದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ 30 ರಾಜ್ಯಗಳಲ್ಲಿ ಕೇವಲ ಆರು ರಾಜ್ಯಗಳು ಮಾತ್ರ ವಿಧಾನ ಪರಿಷತ್​ ಹೊಂದಿವೆ. ಆಂಧ್ರ ಪ್ರದೇಶ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮಾತ್ರ ದ್ವಿಸದನದ ವ್ಯವಸ್ಥೆ ಹೊಂದಿವೆ. ಈಗ ಆಂಧ್ರ ಕೂಡ ಪರಿಷತ್ ರದ್ದುಗೊಳಿಸುತ್ತಿರುವುದರಿಂದ ಈ ಸಂಖ್ಯೆ 5ಕ್ಕೆ ಕುಸಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ