ಪೇಜಾವರ ಶ್ರೀಗೆ ಪದ್ಮವಿಭೂಷಣ, ಶಿಕ್ಷಣ ಸಂತ ಹಾಜಬ್ಬ ಸೇರಿ ರಾಜ್ಯದ 8 ಮಂದಿಗೆ ಪದ್ಮಶ್ರೀ ಗೌರವ

ನವದೆಹಲಿ: ಗಣರಾಜ್ಯೋತ್ಸವ ಮುನ್ನ ದಿನ ಶನಿವಾರ ಕೇಂದ್ರ ಸರ್ಕಾರ ದೇಶದ ನಾಗರಿಕ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಪುರಸ್ಕಾರಕ್ಕೆ ಭಾಜನರಾದವರ ಪಟ್ಟಿ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ (ಮರಣೋತ್ತರ) ಪದ್ಮವಿಭೂಷಣ ಗೌರವ ನೀಡಲಾಗಿದೆ. ಹಾಗೆಯೇ ರಾಜ್ಯದ  8  ಸಾಧಕರಿಗೆ ಪದ್ಮ ಶ್ರೀ ಗೌರವ ಸಂದಿದೆ.

ಏಳು ಮಂದಿಗೆ ಪದ್ಮವಿಭೂಷಣ, 16 ಸಾಧಕರಿಗೆ ಪದ್ಮಭೂಷಣ ಹಾಗೂ 118 ಜನರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳ ಮೂರು ವಿಭಾಗಗಳಲ್ಲಿ ಒಟ್ಟು 141 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಕಿತ್ತಳೆ ಹಣ್ಣು ಮಾರಿ, ದಾನಿಗಳಿಂದ ಹಣ ಸಂಗ್ರಹಿಸಿ ಬಡ ಮಕ್ಕಳಿಗಾಗಿ ಶಾಲೆ ತೆರೆದು ಉಚಿತ ಶಿಕ್ಷಣ ನೀಡುವ ಮೂಲಕ ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಮಂಗಳೂರಿನ  ಹರೇಕಳ ಹಾಜಬ್ಬ ಮತ್ತು 57 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರಿ ಮಾಡಿಕೊಂಡು ಲಕ್ಷಾಂತರ ಸಸಿಗಳನ್ನು ನೆಟ್ಟು, ಬೋಳು ಬಿದ್ದ ಗುಡ್ಡಗಳಿಗೆ ಹಸಿರು ಕಾಡಾಗಿ ಪರಿವರ್ತಿಸಿದ 82 ವರ್ಷದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರಿಗೆ ಪದ್ಮಶ್ರೀ ಗೌರವ ಅರಸಿ ಬಂದಿದೆ. ಮಾಜಿ ಹಾಕಿ ಆಟಗಾರ ಎಂ.ಪಿ. ಗಣೇಶ್, ಡಾ. ಗಂಗಾಧರ್, ಭರತ್ ಗೋಯೆಂಕಾ, ತುಳಸಿ ಗೌಡ, ಹಾಜಬ್ಬ, ಕೆ.ವಿ. ಸಂಪತ್ ಕುಮಾರ್​​, ವಿದುಷಿ ಜಯಲಕ್ಷ್ಮೀ, ವಿಜಯ್ ಸಂಕೇಶ್ವರ್ ಅವರಿಗೆ ಪದ್ಮಶ್ರೀ ದೊರೆತಿದೆ.

ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದವರು

  1. ಜಾರ್ಜ್​ ಫರ್ನಾಂಡಿಸ್ (ಮರಣೋತ್ತರ)- ಸಾರ್ವಜನಿಕ ಸೇವೆ – ಬಿಹಾರ
  2. ಅರುಣ್ ಜೇಟ್ಲಿ (ಮರಣೋತ್ತರ)- ಸಾರ್ವಜನಿಕ ಸೇವೆ – ದೆಹಲಿ
  3. ಅನಿರುದ್ಧ್ ಜುಗ್ನೌಥ್ – ಸಾರ್ವಜನಿಕ ಸೇವೆ – ಮಾರಿಷಸ್
  4. ಮೇರಿ ಕೋಮ್ – ಕ್ರೀಡೆ – ಮಣಿಪುರ
  5. ಛನುಲಾಲ್​ ಮಿಶ್ರ – ಕಲೆ – ಉತ್ತರಪ್ರದೇಶ
  6. ಸುಷ್ಮಾ ಸ್ವರಾಜ್ (ಮರಣೋತ್ತರ) – ಸಾರ್ವಜನಿಕ ಸೇವೆ – ದೆಹಲಿ
  7. ವಿಶ್ವೇಶತೀರ್ಥ ಸ್ವಾಮೀಜಿ (ಮರಣೋತ್ತರ) – ಆಧ್ಯಾತ್ಮಿಕ – ಕರ್ನಾಟಕ

ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾದವರು

  1. ಮುಮ್ತಾಜ್ ಅಲಿ – ಆಧ್ಯಾತ್ಮಿಕ – ಕೇರಳ
  2. ಸೈಯ್ಯದ್ ಮೌಜಂ ಅಲಿ – ಸಾರ್ವಜನಿಕ ಸೇವೆ – ಬಾಂಗ್ಲಾದೇಶ
  3. ಮುಜಾಫರ್ ಹುಸೇನ್ ಬೇಗ್ – ಸಾರ್ವಜನಿಕ ಸೇವೆ- ಜಮ್ಮು-ಕಾಶ್ಮೀರ
  4. ಅಜಯ್ ಚಕ್ರವರ್ತಿ – ಕಲೆ – ಪಶ್ಚಿಮಬಂಗಾಳ
  5. ಮನೋಜ್ ದಾಸ್- ಸಾಹಿತ್ಯ ಮತ್ತು ಶಿಕ್ಷಣ- ಪುದುಚೇರಿ
  6. ಬಾಲಕೃಷ್ಣ ದೋಶಿ-  ವಾಸ್ತುಶಿಲ್ಪ – ಗುಜರಾತ್
  7. ಎಂ.ಎಸ್.ಕೃಷ್ಣಮಾಲ್ ಜಗನ್ನಾಥನ್ – ಸಮಾಜ ಸೇವೆ – ತಮಿಳುನಾಡು
  8. ಎಸ್​.ಸಿ. ಜಮೀರ್ – ಸಾರ್ವಜನಿಕ ಸೇವೆ – ನಾಗಲ್ಯಾಂಡ್
  9. ಅನಿಲ್ ಪ್ರಕಾಶ್ ಜೋಶಿ- ಸಮಾಜ ಸೇವೆ – ಉತ್ತರಾಖಂಡ
  10. ಸೆರಿಂಗ್ ಲ್ಯಾಂಡಲ್ – ವೈದ್ಯಕೀಯ – ಲಡಾಖ್
  11. ಆನಂದ್ ಮಹೀಂದ್ರಾ – ಉದ್ಯಮ- ಮಹಾರಾಷ್ಟ್ರ
  12. ನೀಲಕಂಠ ರಾಮಕೃಷ್ಣ ಮಾಧವ್ ಮೆನನ್​ (ಮರಣೋತ್ತರ) – ಸಾರ್ವಜನಿಕ ಸೇವೆ – ಕೇರಳ
  13. ಮನೋಹರ್ ಪರಿಕ್ಕರ್ (ಮರಣೋತ್ತರ) – ಸಾರ್ವಜನಿಕ ಸೇವೆ – ಗೋವಾ
  14. ಪ್ರೊ.ಜಗದೀಶ್ ಸೇತ್​ – ಸಾಹಿತ್ಯ ಮತ್ತು ಶಿಕ್ಷಣ – ಅಮೆರಿಕ
  15. ಪಿ.ವಿ.ಸಿಂಧು – ಕ್ರೀಡೆ- ತೆಲಂಗಾಣ
  16. ವೇಣು ಶ್ರೀನಿವಾಸನ್ – ಉದ್ಯಮ – ತಮಿಳುನಾಡು

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದವರು 

  1. ಹರೇಕಳ ಹಾಜಬ್ಬ – ಕರ್ನಾಟಕ – ಶಿಕ್ಷಣ
  2. ತುಳಸಿ ಗೌಡ – ಕರ್ನಾಟಕ- ಪರಿಸರ
  3. ಜಗದೀಶ್ ಲಾಲ್ ಅಹುಜಾ – ಪಂಜಾಬ್ – ಸಮಾಜಸೇವೆ
  4. ಮೊಹಮ್ಮದ್ ಶರೀಫ್- ಉತ್ತರಪ್ರದೇಶ- ಸಮಾಜಸೇವೆ
  5. ಜಾವೇದ್ ಅಹ್ಮದ್ ತಕ್- ಜಮ್ಮು-ಕಾಶ್ಮೀರ- ಸಮಾಜಸೇವೆ
  6. ಸತ್ಯನಾರಾಯಣ್ ಮುಂದಯೂರ್- ಅರುಣಾಚಲ ಪ್ರದೇಶ- ಶಿಕ್ಷಣ
  7. ಅಬ್ದುಲ್ ಜಬ್ಬಾರ್- ಮಧ್ಯಪ್ರದೇಶ- ಸಮಾಜಸೇವೆ
  8. ಉಶಾ ಚುಮಾರ್- ರಾಜಸ್ಥಾನ- ನೈರ್ಮಲ್ಯ
  9. ಪೋಪಟ್​ರಾವ್ ಪವಾರ್- ಮಹಾರಾಷ್ಟ್ರ – ನೀರಾವರಿ
  10. ಅರುಣೋದಯ್ ಮೊಂಡಲ್- ಪಶ್ಚಿಮಬಂಗಾಳ- ಆರೋಗ್ಯ
  11. ರಾಧಾಮೋಹನ್ ಮತ್ತು ಸಬರ್​ಮತಿ- ಒಡಿಶಾ- ಸಾವಯವ ಕೃಷಿ
  12. ಕುಶಾಲ್ ಕೊನ್​ವಾರ್ ಶರ್ಮಾ- ಅಸ್ಸಾಂ- ಪಶುವೈದ್ಯಕೀಯ
  13. ಟ್ರಿನಿಟಿ ಸೈಯೂ- ಮೇಘಾಲಯ- ಸಾವಯವ ಕೃಷಿ
  14. ರವಿ ಕಣ್ಣನ್- ಅಸ್ಸಾಂ – ವೈದ್ಯಕೀಯ
  15. ಎಸ್​.ರಾಮಕೃಷ್ಣನ್- ತಮಿಳುನಾಡು- ಸಮಾಜಸೇವೆ
  16. ಸುಂದರಂ ವರ್ಮಾ- ರಾಜಸ್ಥಾನ್-  ಪರಿಸರ
  17. ಮುನ್ನಾ ಮಾಸ್ಟರ್ –ರಾಜಸ್ಥಾನ್- ಕಲೆ
  18. ಯೋಗಿ ಏರಾನ್- ಉತ್ತರಾಖಂಡ- ವೈದ್ಯಕೀಯ
  19. ರಹೀಬಾಯಿ ಸೋಮಾ ಪೋಪರೆ – ಮಹಾರಾಷ್ಟ್ರ – ಸಾವಯವ ಕೃಷಿ
  20. ಹಿಮ್ಮತ್ ರಾಮ್​ ಭಾಂಭೂ – ರಾಜಸ್ಥಾನ – ಪರಿಸರ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ