ಚೀನಾದಲ್ಲಿ ಭಯಾನಕ ಕೊರೊನಾ ವೈರಸ್​​: ಬಲಿಯಾದವರ ಸಂಖ್ಯೆ 41ಕ್ಕೆ ಏರಿಕೆ

ವುಹಾನ್​​​: ಚೀನಾದಲ್ಲಿ ಹರಡಿರುವ ಕೊರೊನಾ ವೈರಸ್​​ಗೆ ಬಲಿಯಾಗುವರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಇದೆ. ಈಗ ಸಾವಿನ ಸಂಖ್ಯೆ 41ಕ್ಕೆ ಏರಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸೋಂಕಿಗೆ ಒಳಗಾಗಿರುವವರ ಸಂಖ್ಯೆ 1300 ದಾಟಿದೆ ಎಂದು ಅಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.

ಚೀನಾದ ವುಹಾನ್​​​ ನಗರದಲ್ಲಿ ಈಗ 15 ಮಂದಿ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ. ಒಟ್ಟು 1.1 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಮೊದಲು ಮಾರಾಣಾಂತಿಕ ಉಸಿರಾಟದ ಕೊರಾನಾ ವೈರಸ್​ ಹರಡಿತು ಎಂದು ಹುಬೈ ಆರೋಗ್ಯ ಆಯೋಗ ತಿಳಿಸಿದೆ.

ಈಗ 444 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ವೈರಸ್​ ಶಂಕಿತ ಸಂಖ್ಯೆ 1,287 ಕ್ಕೆ ಏರಿದೆ ಎಂದು ಚೀನಾದ ಆರೋಗ್ಯ ಸಂಸ್ಥೆ ಹೇಳಿದೆ. ಈ ರೋಗ 30 ಪ್ರಾಂತ್ಯಗಳು, ಸ್ವಾಯತ್ತ ಪ್ರದೇಶಗಳು ಮತ್ತು ನಗರಪಾಲಿಕೆಗಳಲ್ಲಿ ಹರಡಿದೆ ಎಂದು ತಿಳಿದು ಬಂದಿದೆ.

ವುಹಾನ್​​ ಮತ್ತು ಹುಬೈನ 13 ನಗರಗಳಲ್ಲಿ ಈ ಮಾರಣಾಂತಿಕ ಸೋಂಕು ಹೆಚ್ಚಾಗಿ ಹರಡಿದೆ. ಬಳಿಕ ಇತರೆ ದೇಶಗಳಿಗೂ ಹರಡಿದೆ ಎನ್ನಲಾಗಿದೆ. ಚೀನಾದಲ್ಲಿ ಸಾವಿನ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆಗಳಿವೆ.

ಹುಬೈ ಆರೋಗ್ಯ ಸಂಸ್ಥೆಯು ಹೊಸದಾಗಿ 180 ಪ್ರಕರಣಗಳನ್ನು ವರದಿ ಮಾಡಿದೆ. ಅವುಗಳಲ್ಲಿ 77 ಪ್ರಕರಣಗಳು ವುಹಾನ್​ ನಗರದಲ್ಲಿ ಪತ್ತೆಯಾಗಿವೆ. ಹುಬೈ ನಗರವೊಂದರಲ್ಲೇ 729 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರಿಸ್ಥಿತಿಯನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಣೆ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಕೆಲವೇ ಗಂಟೆಗಳಲ್ಲಿ ಕರೊನಾ ವೈರಸ್​ಗೆ ಮೃತಪಟ್ಟರ ಸಂಖ್ಯೆ ಚೀನಾದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ