ಪೌರತ್ವ ತಿದ್ದುಪಡಿ ಕಾಯ್ದೆ ರದ್ದು- ಕೇರಳ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ನಿರ್ಣಯ ಅಸಾಂವಿಧಾನಿಕ

ತಿರುವನಂತಪುರಂ, ಜ.2- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಕೇರಳ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ನಿರ್ಣಯ ಅಸಾಂವಿಧಾನಿಕ ಮತ್ತು ಕಾನೂನು ಮಾನ್ಯತೆ ಇಲ್ಲದ್ದು ಎಂದು ರಾಜ್ಯಪಾಲ ಮಹಮ್ಮದ್ ಆರಿಫ್ ಖಾನ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಸಂಪೂರ್ಣ ಅಧಿಕಾರ ವ್ಯಾಪ್ತಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಪ್ರಾಪ್ತಿಯಾಗಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ. ಹೀಗಾಗಿ ಕೇರಳ ವಿಧಾನಸಭೆಯಲ್ಲಿ ಮಂಡಿಸಿರುವ ಕಾಯ್ದೆ ವಿರುದ್ಧದ ಗೊತ್ತುವಳಿಗೆ ಯಾವುದೇ ಕಾನೂನು ಸಿಂಧುತ್ವ ಹೊಂದಿರುವುದಿಲ್ಲ ಮತ್ತು ಇದು ಅಸಾಂವಿಧಾನಿಕ ಎಂದು ಖಾನ್ ಹೇಳಿದರು.

ತಿರುವನಂತಪುರಂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಸ್ತವವಾಗಿ ಕೇರಳದಲ್ಲಿ ವಲಸೆ ಸಮಸ್ಯೆ ಇಲ್ಲ. ಹೀಗಿರುವಾಗ ಈ ಮಂದಿ ವಿನಾ ಕಾರಣ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಏಕೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ