ಜಕಾರ್ತ ಮತ್ತು ಜಾವಾ ದ್ವೀಪದ ಮೇಲೆ ಅಪ್ಪಳಿಸಿದ ಭಾರೀ ಚಂಡಮಾರುತ

ಜಕಾರ್ತ, ಜ.2- ಹೊಸ ವರ್ಷಾಚರಣೆ ಸಂಭ್ರಮಕ್ಕೆ ಸಜ್ಜಾಗುತ್ತಿದ್ದ ಇಂಡೋನೇಷಿಯಾ ರಾಜಧಾನಿ ಜಕಾರ್ತ ಮತ್ತು ಜಾವಾ ದ್ವೀಪದ ಮೇಲೆ ಅಪ್ಪಳಿಸಿದ ಭಾರೀ ಚಂಡಮಾರುತ ಭೀಕರ ಪ್ರವಾಹ ಮತ್ತು ಭೂ ಕುಸಿತಗಳಿಂದ 26 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.

ಈ ಪ್ರಕೃತಿ ವಿಕೋಪದಲ್ಲಿ ಕೆಲವರು ಕಣ್ಮರೆಯಾಗಿದ್ದು , ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ರಾಜಧಾನಿ ಜಕಾರ್ತ , ಗ್ರೇಟರ್ ಜಕಾರ್ತ ಮತ್ತು ಸುತ್ತಮುತ್ತಲ ಪ್ರದೇಶಗಳು ಹಾಗೂ ಜಾವಾ ದ್ವೀಪದ ಲೆಬಕ್‍ನಲ್ಲಿ ಪ್ರವಾಹದ ರೌದ್ರಾವತಾರದಿಂದ ಎರಡು ಡಜನ್‍ಗೂ ಹೆಚ್ಚು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಭಾರೀ ಬಿರುಗಾಳಿಯೊಂದಿಗೆ ಕುಂಭದ್ರೋಣ ಮಳೆ , ಪ್ರವಾಹ ಮತ್ತು ಭೂ ಕುಸಿತಗಳಿಂದ ಹಲವಾರು ಮನೆಗಳಿಗೆ ಹಾನಿಯಾಗಿದ್ದು , ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಸಹಸ್ರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದ್ದು , ನಾಪತ್ತೆ ಕಾರ್ಯಕ್ಕಾಗಿ ತೀವ್ರ ಶೋಧ ಮುಂದುವರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ