ಒಲಂಪಿಕ್ ಕ್ವಾಲಿಫೈರ್-ಅರ್ಹತೆ ಪಡೆದ ಬಾಕ್ಸರ್ ವಿಕಾಸ್ ಕೃಷ್ಣನ್

ಬೆಂಗಳೂರು, ಡಿ.30- ಮಾಜಿ ವಿಶ್ವ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತ ಬಾಕ್ಸರ್ ವಿಕಾಸ್ ಕೃಷ್ಣನ್ ಒಲಂಪಿಕ್ ಕ್ವಾಲಿಫೈರ್‍ನಲ್ಲಿ ಭಾಗವಹಿಸುವ ಭಾರತೀಯ ತಂಡದಲ್ಲಿ ಸೇರ್ಪಡೆಯಾಗುವುದಕ್ಕೆ ಅರ್ಹತೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ವಿಕಾಸ್ ಕೃಷ್ಣನ್ (26) ಪುರುಷರ 69 ಕೆ.ಜಿ ವಿಭಾಗದಲ್ಲಿ ದುರ್ಯೋಧನ ಸಿಂಗ್ ಅವರನ್ನು ಸುಲಭವಾಗಿ ಮಣಿಸಿ ವಿಜೇತರಿಗೆ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿರುವ ಭಾರತ ಬಾಕ್ಸಿಂಗ್ ತಂಡದಲ್ಲಿ ಸ್ಥಾನ ಗಿಟ್ಟಿಸಿದರು.

ಫೆ.3ರಿಂದ 14ರವರೆಗೆ ಚೀನಾದಲ್ಲಿ ಒಲಂಪಿಕ್ ಕ್ರೀಡಾಕೂಟಕ್ಕೆ ತಂಡಗಳು ಮತ್ತು ಪಟುಗಳನ್ನು ಆಯ್ಕೆ ಮಾಡಲು ಅರ್ಹತಾ ಸುತ್ತಿನ ಪಂದ್ಯಾವಳಿಗಳು ನಡೆಯಲಿವೆ.

ಭಾರತೀಯ ಬಾಕ್ಸರ್‍ಗಳ ತಂಡದಲ್ಲಿ ಈಗಾಗಲೇ ಗೌರವ್ ಸೋಲಂಕಿ, ನಮನ್ , ತನ್ವರ್, ಆಶಿಶ್ ಕುಮಾರ್, ಸತೀಶ್‍ಕುಮಾರ್ ಮತ್ತು ಸಚಿನ್ ಕುಮಾರ್ ಈಗಾಗಲೇ ಆಯ್ಕೆಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ