ಜ.26 ರಿಂದ ಫೆ. 8 ರವರೆಗೆ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರ

ಬೆಂಗಳೂರು, ಡಿ.30- ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರೋಟರಿ ಬೆಂಗಳೂರು ಉತ್ತರ ಆರ್‍ಐಡಿ-3190 ಸಂಯುಕ್ತ ಆಶ್ರಯದಲ್ಲಿ ಜ.26 ರಿಂದ ಫೆ. 8 ರವರೆಗೆ ಸೀಳು ತುಟಿ, ಸೀಳು ಅಂಗಗಳ ಸುಟ್ಟ ಗಾಯಗಳಿಂದ ಉಂಟಾದ ವಿರೂಪಗಳ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ವಿವಿ ಪ್ರಾಂಶುಪಾಲ ಡಾ. ಎಂ.ಜಿ ಶಿವರಾಮ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಮೂರು ವರ್ಷ ಮೇಲ್ಪಟ್ಟಿರಬೇಕು. ಇವರಿಗೆ ಶಸ್ತ್ರಚಿಕಿತ್ಸೆ , ಊಟ ವಸತಿ ಸೌಲಭ್ಯ ಉಚಿತವಾಗಿ ಕಲ್ಪಿಸಲಾಗಿದೆ ಎಂದರು.

ಒಂದು ಸಾವಿರ ಮಕ್ಕಳು ಜನಿಸಿದರೆ ಅದರಲ್ಲಿ ಒಂದು ಮಗು ಈ ತೊಂದರೆಗೆ ಒಳಗಾಗುವ ಸಾಧ್ಯ ತೆ ಇದೆ.

ಅಮೆರಿಕದ ರೋಟೋಪ್ಲಾಂಟ್ ಇಂಟರ್ನ್ಯಾಷನಲ್ ಸಂಸ್ಥೆ 30 ತಜ್ಞರ ತಂಡ ಶಸ್ತ್ರಚಿಕಿತ್ಸೆ ಮಾಡಲಿದ್ದು , ಈಗಾಗಲೇ ಶಿಬಿರದಲ್ಲಿ ಪಾಲ್ಗೊಳ್ಳಲು 80 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಳೆದ ಆರು ವರ್ಷದಿಂದ ಈ ಶಿಬಿರ ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದು ವಿವರಿಸಿದರು. ಹೆಸರು ನೋಂದಾಯಿಸಿ ಕೊಳ್ಳುವ ಆಸಕ್ತರು 9448581730, 9900758946ಗೆ ಸಂಪರ್ಕಿಸಲು ಕೋರಿದ್ದಾರೆ.

ಶಿವುಕುಮಾರ್ ಪಿಆರ್‍ಒ ಧರ್ಮೆಂದ್ರ, ಎಂಜಿಎನ್ ಮಹಾದೇವ ಗೌಡ, ವಿನೋದ ಕುಮಾರ್, ಆಸ್ಪತ್ರೆಯ ಅಧೀಕ್ಷಕ, ಡಾ.ಪಿ.ಜಿ ಸಾಗರ್, ಆಡಳಿತಾಧಿಕಾರಿ ಕೆ.ಆರ್. ವಿಜಯ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ