ಪೇಜಾವರ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರ

ಉಡುಪಿ: ಉಸಿರಾಟದ ತೊಂದರೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ. ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದೆ, ಉಸಿರಾಟದ ಪ್ರಮಾಣದಲ್ಲಿ ಮತ್ತಷ್ಟು ಇಳಿಮುಖವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪೇಜಾವರ ಶ್ರೀಗಳಿಗೆ ಇಂದು ವೈದ್ಯರು ಮತ್ತೊಮ್ಮೆ ಎಂಆರ್​​ಐ ಸ್ಕ್ಯಾನಿಂಗ್​ ಮಾಡಲಿದ್ದಾರೆ. ರಾತ್ರಿಯೂ ಸಹ ಎಂಆರ್​ಐ ಸ್ಕ್ಯಾನಿಂಗ್​​ ಮಾಡಲಾಗಿತ್ತು. ಎರಡೂ ವರದಿಗಳು ಬಂದ ಬಳಿಕ ವೈದ್ಯರು ಶ್ರೀಗಳ ಹೆಲ್ತ್​​ ಬುಲೆಟಿನ್​ ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶ್ರೀಗಳ‌ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ. ಅವರ ದೇಹ ಸ್ಥಿತಿಯಲ್ಲಿ  ಇಳಿಮುಖವಾಗಿದೆ. ಉಸಿರಾಟದ ಪ್ರಮಾಣದಲ್ಲೂಇಳಿಕೆಯಾಗಿದೆ. ವೆಂಟಿಲೇಟರ್​​​ನಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ ಏಮ್ಸ್​​ ವೈದ್ಯರ ಸಲಹೆಯಂತೆ ಶ್ರೀಗಳಿಗೆ ಕೆಎಂಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಇನ್ನು, ಶ್ರೀಗಳ ಆರೋಗ್ಯ ಸುಧಾರಿಸಲೆಂದು ಇಡಿ ಭಕ್ತ ಸಮುದಾಯವೇ ಪ್ರಾರ್ಥನೆ ಸಲ್ಲಿಸುತ್ತಿದೆ. ಡಿ.20ರಿಂದ ಆಸ್ಪತ್ರೆಗೆ ದಾಖಲಾಗಿರುವ ಶ್ರೀಗಳಿಗೆ ನ್ಯುಮೋನಿಯಾ ಸಮಸ್ಯೆ ಕೂಡ ಇದೆ. ಇಂದು ವೈದ್ಯರು ಬಿಡುಗಡೆ ಮಾಡಲಿರುವ  ಶ್ರೀಗಳ ಹೆಲ್ತ್​​ ಬುಲೆಟಿನ್​​ಗೆ ಭಕ್ತರು ಮತ್ತು ಆಪ್ತರು ಕಾಯುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ