ಹಾಸನ, ಡಿ.11- ಜಿಲ್ಲೆಯಲ್ಲಿ ಜೀತಪದ್ಧತಿ ಜೀವಂತವಾಗಿರುವುದನ್ನು ಹೊಳೆನರಸೀಪುರ ತಾಲ್ಲೂಕು ಆಡಳಿತ ಪತ್ತೆಹಚ್ಚಿ 16 ಮಂದಿಯನ್ನು ರಕ್ಷಿಸಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮುಂಡನಹಳ್ಳಿಯ ಕಬ್ಬಿನ ಗದ್ದೆಯಲ್ಲಿ ದಿನಕ್ಕೆ 12 ಗಂಟೆ ದುಡಿಸಿಕೊಳ್ಳುತ್ತಿದ್ದುದನ್ನು ತಾಲ್ಲೂಕು ಆಡಳಿತ ಪತ್ತೆಹಚ್ಚಿ ನಾಲ್ವರು ಮಕ್ಕಳು, ನಾಲ್ವರು ಮಹಿಳೆಯರು, ನಾಲ್ವರು ಪುರುಷರು ಸೇರಿದಂತೆ 16 ಮಂದಿಯನ್ನು ರಕ್ಷಿಸಲಾಗಿದೆ.
ಭದ್ರಾವತಿ ಹಾಗೂ ತಮಿಳುನಾಡು ಮೂಲದ ಕಾರ್ಮಿಕರನ್ನು ಕಬ್ಬಿನ ಗದ್ದೆ ಕೆಲಸಕ್ಕೆ ಕರೆಸಿಕೊಂಡು ಜೀತದಾಳುಗಳಾಗಿ ಕಡಿಮೆ ಹಣ ನೀಡಿ 12 ಗಂಟೆಗೂ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದ ಬಗ್ಗೆ ಮಾನವ ಕಳ್ಳಸಾಗಣೆ ಪತ್ತೆಹಚ್ಚಿದ ಹೊಳೆನರಸೀಪುರ ತಾಲ್ಲೂಕು ಆಡಳಿತ ಸಂತ್ರಸ್ತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ಷಣೆ ನೀಡಿ ಮುಂದಿನ ಕ್ರಮಕ್ಕೆ ಮುಂದಾಗಿದೆ.