ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣ

ಬೆಂಗಳೂರು, ಡಿ.4-ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕ-ಯುವತಿಯರಿಗೆ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಷನ್ ಹಾಗೂ ಹಾರ್ಡವೇರ್ ಮತ್ತು ನೆಟ್‍ವರ್ಕ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು ನೀಡಲಿದೆ.

ಕಂಪ್ಯೂಟರ್ ತರಬೇತಿಯು ಜನವರಿ 1, 2020 ರಿಂದ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು ಕನಿಷ್ಟ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ಪಿಯುಸಿ, ಡಿಗ್ರಿ, ಡಿಪ್ಲೋಮ ಹೊಂದಿದವವರಿಗೆ ಮೊದಲ ಆದ್ಯತೆಯಾಗಿದ್ದು, ಕನಿಷ್ಠ 18 ರಿಂದ 27 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ /ವರ್ಗದವರಿಗೆ ಗರಿಷ್ಟ ವಯಸ್ಸು 30 ಆಗಿರುತ್ತದೆ.

ತರಬೇತಿ ಪಡೆಯಲಿಚ್ಛಿಸುವವರು ನೇರಸಂದರ್ಶನಕ್ಕೆ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು.

ನೇರ ಸಂದರ್ಶನವು ಡಿ.9 ರಿಂದ ಡಿ.13ರವರೆಗೆ ಜರುಗಲಿದೆ.

ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲ್ಲಿದ್ದು, ಅರ್ಜಿ ಫಾರಂ ಗಳನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, ಮಲ್ಲೇಶ್ವರಂ, ದೂ.ಸಂ. 23440036 / 23463580 / 9448538107 ಸಂಪರ್ಕಿಸಬಹುದಾಗಿದೆ ಎಂದು ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ