ಜಪಾನ್‌-ಭಾರತ 2+2 ಮಾತುಕತೆ, ಉಗ್ರವಾದ ಕಿತ್ತೊಗೆಯಲು ಪಾಕ್ ಗೆ ಎಚ್ಚರಿಕೆ

ಹೊಸದಿಲ್ಲಿ: ಪಾಕಿಸ್ತಾನದ ಉಗ್ರ ಪೋಷಣೆ­ಯಿಂದಾಗಿ ಪ್ರಾದೇಶಿಕ ಶಾಂತಿ ಭಗ್ನಗೊಳ್ಳುತ್ತಿದೆ. ಈ ಕೂಡಲೇ ಪಾಕ್‌ ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಕಿತ್ತೊಗೆಯಬೇಕು ಎಂದು ಭಾರತ-ಜಪಾನ್‌ ಜಂಟಿಯಾಗಿ ಒತ್ತಾಯಿಸಿವೆ.

ಭಾರತ-ಜಪಾನ್‌ ನಡುವಿನ ಚೊಚ್ಚಲ 2 ಪ್ಲಸ್‌ 2 ಮಾತುಕತೆ ಶನಿವಾರ ನಡೆಯಿತು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಜಪಾನ್‌ನ ರಕ್ಷಣಾ ಸಚಿವ ತಾರೊ ಕೊನೊ ಹಾಗೂ ವಿದೇಶಾಂಗ ಸಚಿವ ತೊಶಿಮಿತ್ಸು ಮೊಟೆಗಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಬಳಿಕ ಜಂಟಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ , ಯಾವುದೇ ರಾಷ್ಟ್ರ ತನ್ನ ನೆಲವನ್ನು ಭಯೋತ್ಪಾದಕರ ಉಗಮ ಸ್ಥಾನವಾಗಲು ಬಿಡಬಾರದು. ಪ್ರಾದೇಶಿಕ ಭದ್ರತೆಗೆ ಇದು ಅಪಾಯಕಾರಿಯಾಗಿದೆ ಎಂದು ಪಾಕ್‌ಗೆ ಎಚ್ಚರಿಕೆ ನೀಡಲಾಗಿದೆ. ಕಳೆದ ವರ್ಷ ಭಾರತ-ಜಪಾನ್‌ ವಾರ್ಷಿಕ ಶೃಂಗಸಭೆಯಲ್ಲಿಪ್ರಧಾನಿ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಚರ್ಚೆ ನಡೆಸಿ 2 ಪ್ಲಸ್‌2 ಮಾತುಕತೆ ಹಮ್ಮಿಕೊಳ್ಳುವ ಬಗ್ಗೆ ನಿರ್ಧರಿಸಿದ್ದರು. ಅದರಂತೆ ಜಪಾನ್‌ನ ಸಚಿವ ನಿಯೋಗ ಸದ್ಯ ಭಾರತಕ್ಕೆ ಭೇಟಿ ನೀಡಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ