ಬಡವರಿಗೆ ಉಚಿತವಾಗಿ ಈರುಳ್ಳಿ ಹಂಚಿಕೆ; ಚಿನ್ನ ಕೊಟ್ಟಿದ್ದಕ್ಕಿಂತ ಹೆಚ್ಚು ಖುಷಿಯಾದ ಜನರು!

ಕೊಲ್ಕತ್ತಾ: ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.  ಒಂದು ಕೆ.ಜಿ.ಈರುಳ್ಳಿ 120-140 ರೂ ಇದೆ. ಇದರಿಂದ  ಬಡವರಂತೂ ಈರುಳ್ಳಿ ಕೊಂಡುಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳದಲ್ಲೂ ಕೆ.ಜಿ.ಈರುಳ್ಳಿ ಬೆಲೆ 100 ರೂ.ದಾಟಿದೆ. ಹೀಗಾಗಿ ಉತ್ತರದ 24 ಪರಗಣ ಜಿಲ್ಲೆಯ ಸ್ಥಳೀಯ ಸಮುದಾಯದವರು 160 ಬಡ ಕುಟುಂಬಗಳಿಗೆ 1 ಕೆ.ಜಿ.ಈರುಳ್ಳಿಯನ್ನು ಉಚಿತವಾಗಿ ನೀಡಿದ್ದಾರೆ.

ಈರುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ಬಡವರಿಗೆ ಕೊಂಡುಕೊಳ್ಳಲು ಬಹಳ ಕಷ್ಟವಾಗುತ್ತಿದೆ. ಸಾಮಾನ್ಯವಾಗಿ ಕೊಲ್ಕತ್ತಾದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ 35 ರೂಪಾಯಿ ಇತ್ತು. ಆದರೆ ಈಗ 100-110 ರೂಪಾಯಿ ಆಗಿದ್ದು, ನಂಬಲು ಆಗುತ್ತಿಲ್ಲ. ಸಾಮಾನ್ಯ ಜನರು ಈರುಳ್ಳಿ ಖರೀದಿಸಲು ಹೆಣಗಾಡುತ್ತಿದ್ದಾರೆ.

ಪ.ಬಂಗಾಳದ ಸ್ಥಳೀಯ ಸಮುದಾಯ ಗೊರಾಬಜಾರ್ ಸಂಘ ಮಿತ್ರ  ಬಡವರಿಗೆ ಉಚಿತವಾಗಿ ಈರುಳ್ಳಿ ಪೂರೈಸಿದೆ. ಡಂಡಂ ಪ್ರದೇಶದಲ್ಲಿರುವ ಸಮುದಾಯದ ಕ್ಲಬ್​​ನಲ್ಲಿ ಬಡಕುಟುಂಬಗಳಿಗೆ ಉಚಿತವಾಗಿ ಈರುಳ್ಳಿ ನೀಡಿದೆ. ಇದರಿಂದ ಬಡಜನರು ಚಿನ್ನ ಕೊಂಡಷ್ಟೇ ಖುಷಿಯಾಗಿದ್ದಾರೆ.

ನಾವು 160 ಕೆಜಿ ಈರುಳ್ಳಿಯನ್ನು ಬಡವರಿಗೆ ಉಚಿತವಾಗಿ ನೀಡಿದ್ದೇವೆ. ಮೊದಲು ಬಂದವರಿಗೆ ಆದ್ಯತೆ ಎಂದು ಹೇಳಿ ಈರುಳ್ಳಿ ಹಂಚಿದ್ದೇವೆ ಎಂದು ಸಂಘಮಿತ್ರ ಸಮುದಾಯದವರು ಹೇಳಿದ್ದಾರೆ.

ಇಷ್ಟೇ ಅಲ್ಲದೇ, ‘ಆನಿಯನ್​ ಫೇರ್​’ ಆಯೋಜಿಸಿ ಉಚಿತವಾಗಿ ತರಕಾರಿ ವಿತರಣೆ ಮಾಡಲು ನಿರ್ಧರಿಸಿದ್ಧೇವೆ. ಬೆಲೆ ಹೆಚ್ಚಿರುವುದರಿಂದ ಬಡವರು ಈರುಳ್ಳಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ನಾವು ಗಮನಿಸಿದ್ದೇವೆ ಎಂದರು ಸಮುದಾಯದ ಅಧ್ಯಕ್ಷರು ಹೇಳಿದರು.

ಕೆಲವು ವರ್ಷಗಳ ಹಿಂದೆ, ಆಲೂಗೆಡ್ಡೆ ಬೆಲೆಯಲ್ಲಿ ಏರಿಕೆಯಾಗಿತ್ತು. ಒಂದು ಕೆ.ಜಿ ಆಲೂಗೆಡ್ಡೆ 80-90 ಕೆ.ಜಿ.ಆಗಿತ್ತು. ಆಗಲೂ ಸಹ ಮಿತ್ರ ಕ್ಲಬ್​​ನಿಂದ ಬಡವರಿಗೆ ಉಚಿತವಾಗಿ ತರಕಾರಿ ನೀಡಲಾಗಿತ್ತು ಎಂದು ಸಂಘಮಿತ್ರದ ಅಧ್ಯಕ್ಷ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ