ಶ್ರೀಹರಿಕೋಟ: ಇಸ್ರೊದಿಂದ ಪಿಎಸ್ಎಲ್ ವಿ-ಸಿ47 ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಸುಧಾರಿತ ಭೂ ವೀಕ್ಷಣೆ ಉಪಗ್ರಹ ಕಾರ್ಟೊಸ್ಯಾಟ್-3 ಮತ್ತು 13 ಯುಎಸ್ ನ್ಯಾನೊ ಸ್ಯಾಟಲೈಟ್ ಗಳನ್ನು ಹೊತ್ತೊಯ್ದ ಉಡಾವಣಾ ವಾಹಕ ಪಿಎಸ್ಎಲ್ ವಿ-ಸಿ47 ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಭಾರತೀಯ ಕಾಲಮಾನ 9.28ರ ವೇಳೆಗೆ 44.4 ಮೀಟರ್ ಎತ್ತರದ 320 ಟನ್ ತೂಕದ ರಾಕೆಟ್ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು. ಮೋಡಕವಿದ ವಾತಾವರಣವಿದ್ದರೂ ಕೂಡ ಉಡಾವಣೆ ಸಹಜವಾಗಿ ಯಶಸ್ವಿಯಾಗಿ ನಡೆಯಿತು ಎಂದು ಇಸ್ರೊ ತಿಳಿಸಿದೆ.
1625 ಕೆಜಿ ತೂಕದ ಕಾರ್ಟೊಸ್ಯಾಟ್ -3 ಸುಧಾರಿತ ಕ್ಷಿಪ್ರ ಉಪಗ್ರಹವಾಗಿದ್ದು, ಇದರ ಜೀವಿತಾವಧಿ 5 ವರ್ಷಗಳು.
ಭೂಮಿ ಚಿತ್ರಣ ಹಾಗೂ ಮ್ಯಾಪ್‌ಗೆ ಸಂಬಂಧಿಸಿದ ಕಾರ್ಟೊಸ್ಯಾಟ್‌-3 ಸೇರಿದಂತೆ ಅಮೆರಿಕದ 13 ಮೈಕ್ರೋ ಉಪಗ್ರಹಗಳನ್ನು ನಭಕ್ಕೆ ಕಳುಹಿಸಿದೆ. ಹೆಚ್ಚಿನ ರೆಸಲ್ಯೂಶನ್‌ ಇರುವ ಫೋಟೊಗಳನ್ನು ಸೆರೆ ಹಿಡಿಯುವ ಸಾಮರ್ಥ್ಯವಿರುವ 3ನೇ ತಲೆಮಾರಿನ ಉಪಗ್ರಹ ಕಾರ್ಟೊಸ್ಯಾಟ್‌-3 ಹಾಗೂ ಅಮೆರಿಕದ 13 ಸಣ್ಣ ಉಪಗ್ರಹಗಳು ಸೇರಿ 14 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ47 ರಾಕೆಟ್‌ ಇಂದು ನಭಕ್ಕೆ ಚಿಮ್ಮಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ