ಇಂದು ಸಂಜೆಯೊಳಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ

ಬೆಂಗಳೂರು,ನ.14- ಬಿಜೆಪಿಗೆ ಅಧಿಕೃತವಾಗಿ ಮಾಜಿ ಶಾಸಕರು ಸೇರ್ಪಡೆಯಾಗಿರುವುದರಿಂದ ಇಂದು ಸಂಜೆಯೊಳಗೆ 15 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಸಮಿತಿ ಟಿಕೆಟ್ ಘೋಷಣೆ ಮಾಡಲಿದೆ.

ಬಹುತೇಕ ಕಾಂಗ್ರೆಸ್-ಜೆಡಿಎಸ್‍ನಿಂದ ಬಂದಿರುವ ಮಾಜಿ ಶಾಸಕರಿಗೆ ಟಿಕೆಟ್ ನೀಡಲು ನಿನ್ನೆ ನಡೆದ ಕೋರ್ ಕಮಿಟಿ ಸಭೆ ತೀರ್ಮಾನಿಸಿತು. ಈಗಾಗಲೇ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಿಕೊಡಲಾಗಿದ್ದು, ಸಂಜೆಯೊಳಗೆ ಪ್ರಕಟವಾಗಲಿದೆ.

ಚುನಾವಣಾ ಸಮಿತಿ ಮುಖ್ಯಸ್ಥ ಅರವಿಂದ ಲಿಂಬಾವಳಿ ನೇತೃತ್ವದ ಸಮಿತಿಯು ಕೋರ್ ಕಮಿಟಿ ತೆಗೆದುಕೊಂಡ ನಿರ್ಣಯವನ್ನು ವರಿಷ್ಠರಿಗೆ ಕಳುಹಿಸಿಕೊಟ್ಟಿದೆ.
ಇದರ ಪ್ರಕಾರ 15 ಕ್ಷೇತ್ರಗಳಿಗೆ ಕಾಂಗ್ರೆಸ್-ಜೆಡಿಎಸ್‍ನಿಂದ ಸಿಡಿದೆದ್ದಿರುವ ಮಾಜಿ ಶಾಸಕರಿಗೆ ಬಹುತೇಕ ಟಿಕೆಟ್ ಖಾತರಿಯಾಗಿದೆ.

ರಾಜರಾಜೇಶ್ವರಿನಗರ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗದ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಸಂಭವನೀಯ ಪಟ್ಟಿ
ಹೊಸಕೋಟೆ- ಎಂಟಿಬಿ ನಾಗರಾಜ್
ಚಿಕ್ಕಬಳ್ಳಾಪುರ -ಡಾ.ಕೆ.ಸುಧಾಕರ್
ನಾರಾಯಣಗೌಡ-ಕೆ.ಆರ್.ಪೇಟೆ
ಹುಣಸೂರು-ಎಚ್.ವಿಶ್ವನಾಥ್/ಜಿ.ಟಿ.ಹರೀಶ್‍ಗೌಡ/ವಿಜಯ್‍ಶಂಕರ್/ಸಿ.ಪಿ.ಯೋಗೇಶ್ವರ್
ಮಹಾ ಲಕ್ಷ್ಮಿಲೇಔಟ್-ಕೆ.ಗೋಪಾಲಯ್ಯ
ಯಶವಂತಪುರ-ಎಸ್.ಟಿ.ಸೋಮಶೇಖರ್
ಶಿವಾಜಿನಗರ- ಶರವಣ/ಕಟ್ಟಾಸುಬ್ರಹ್ಮಣ್ಯ ನಾಯ್ಡು/ನಿರ್ಮಲ್ ಕುಮಾರ್ ಸುರಾನ
ಕೆ.ಆರ್.ಪುರ- ಭೆರತಿ ಬಸವರಾಜ್
ಹಿರೇಕೆರೂರು-ಬಿ.ಸಿ.ಪಾಟೀಲ್
ಅಥಣಿ-ಮಹೇಶ್ ಕುಮಟಳ್ಳಿ
ರಾಣೆಬೆನ್ನೂರು-ಆರ್.ಶಂಕರ್/ಕೆ.ಇ.ಕಾಂತೇಶ್
ಕಾಗವಾಡ-ಶ್ರೀಮಂತಪಾಟೀಲ್
ಗೋಕಾಕ್-ರಮೇಶ್ ಜಾರಕಿಹೊಳಿ
ವಿಜಯನಗರ-ಆನಂದ್‍ಸಿಂಗ್
ಯಲ್ಲಾಪುರ- ಶಿವರಾಮ್ ಹೆಬ್ಬಾರ್

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ