ಅಯೋಧ್ಯೆ ಮಹಾ ತೀರ್ಪು ಪ್ರಕಟ: ವಿವಾದಿತ ಭೂಮಿಯಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಆದೇಶ

Varta Mitra News

ಅಯೋಧ್ಯೆ ಮಹಾ ತೀರ್ಪು ಪ್ರಕಟ: ವಿವಾದಿತ ಭೂಮಿಯಲ್ಲೇ ರಾಮ ಮಂದಿರ ನಿರ್ಮಾಣಕ್ಕೆ ಆದೇಶ

ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದೆ. ಈ ಮೂಲಕ ಸುಮಾರು 5 ಶತಮಾನಗಳ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ವಿವಾದಿತ ಭೂಮಿಯನ್ನು ನ್ಯಾಸ್​ಗೆ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಇನ್ನು ಸರಿಯಾಗಿ 10.30ಕ್ಕೆ ತೀರ್ಪನ್ನು ಓದಲು ಆರಂಭಿಸಿದ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯಿ, ಅರ್ಧಗಂಟೆಗೂ ಅಧಿಕ ಕೂಲಂಕುಶವಾಗಿ ವಿವರಿಸಿದರು.

ರಾಮ ಜನ್ಮ ಭೂಮಿ ವಿವಾದಿತ ಭೂಮಿ ರಾಮಜನ್ಮ ಭೂಮಿ ನ್ಯಾಸ್​ಗೆ ನೀಡಲು ಆದೇಶ

ಈ ವೇಳೆ ಅಲಹಾಬಾದ್​ ಹೈ ಕೋರ್ಟ್​ ತೀರ್ಪನ್ನು ಬರ್ಖಾಸ್ತುಗೊಳಿಸಿದ ಸುಪ್ರೀಂ ಕೋರ್ಟ್​, ಮಸೀದಿ ಕಟ್ಟಲು ಪರ್ಯಾಯ ಜಾಗ ನೀಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತು. ನಂತರ ವಿವಾದಿತ ಸ್ಥಳವನ್ನು ರಾ ನೀಡಬೇಕು, ಕೇಂದ್ರ ಸರ್ಕಾರ ವಿವಾದಿತ ಸ್ಥಳವನ್ನ ಮೂರು ತಿಂಗಳಲ್ಲಿ ಪಡೆದುಕೊಂಡು ಸ್ವೀಕೃತದಾರರಿಗೆ ನೀಡಬೇಕು,

ಸುನ್ನಿ ವಕ್ಫಬೋರ್ಡ್​ಗೆ ಪರ್ಯಾಯವಾಗಿ 5 ಎಕರೆ ಸ್ಥಾನ ನೀಡಲು ಆದೇಶ

ರಾಮಜನ್ಮ ಭೂಮಿ ಟ್ರಸ್ಟ್ ನಿರ್ಮಿಸಲು ಆದೇಶ

ಟ್ರಸ್ಟ್​ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರಾತಿನಿಧ್ಯ ನೀಡಲು ಸೂಚನೆ.

2. ರಾಮಲಲ್ಲಾನನ್ನು ಪಿರ್ಯಾಯುದಾರನಾಗಿ ಪರಿಗಣನೆ

ವಿಶೇಷವೆಂದರೆ ಶಿಯಾ ವಕ್ಫ್​ ಬೋರ್ಡ್​​ ಹಾಗೂ ನಿರ್ಮೋಹಿ ಅಖಾಡವನ್ನು ಪಿರ್ಯಾಯದಾರ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್​ ಸುನ್ನಿ ವಕ್ಫ್ ಬೋರ್ಡ್​ ಹಾಗೂ ರಾಮಲಲ್ಲಾನನ್ನು ಪರಿಗಣಿಸಿತು. ಆದರೆ, ವಿವಾದಿತ ಭೂಮಿಯನ್ನು ನೇರವಾಗಿ ರಾಮಲಲ್ಲಾನಿಗೆ ನೀಡದೇ, ರಾಮಜನ್ಮ ಭೂಮಿ ಟ್ರಸ್ಟ್​ಗೆ ನೀಡಿತು.

3. ಸುನ್ನಿ ವಕ್ಫಬೋರ್ಡ್​ಗೆ ಪರ್ಯಾಯವಾಗಿ 5 ಎಕರೆ ಸ್ಥಾನ ನೀಡಲು ಆದೇಶ

ಈ ವೇಳೆ ಅಲಹಾಬಾದ್​ ಹೈ ಕೋರ್ಟ್​ ತೀರ್ಪನ್ನು ಬರ್ಖಾಸ್ತುಗೊಳಿಸಿದ ಸುಪ್ರೀಂ ಕೋರ್ಟ್​, ಮಸೀದಿ ಕಟ್ಟಲು ಪರ್ಯಾಯ ಜಾಗ ನೀಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿತು. ಮುಸ್ಲಿಮರಿಗೆ ಮಸೀದಿಗಾಗಿ ಪರ್ಯಾಯ ಜಾಗ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು.

ಇನ್ನು ಸುನ್ನಿ ವಕ್ಫ್​​ ಬೋರ್ಡ್​ಗೆ ಪರ್ಯಾಯವಾಗಿ 5 ಎಕೆರೆ ಜಾಗವನ್ನು ನೀಡಬೇಕು ಎಂದು ತಿಳಿಸಿದ ಸುಪ್ರೀಂ ಕೋರ್ಟ್, ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ಮುಸ್ಲಿಮ್​ ಕಕ್ಷಿದಾರರು ಸೂಕ್ತ ಸಾಕ್ಷ್ಯವನ್ನು ಒದಗಿಸಿಲ್ಲ, ವಿವಾದಿತ ಜಾಗವನ್ನು ತಮ್ಮದು ಎಂದು ಸಾಬೀತು ಪಡಿಸುವಲ್ಲಿ ಮುಸ್ಲಿಮ್​ ಕಕ್ಷಿದಾರರು ವಿಫಲವಾಗಿದ್ದಾರೆ ಎಂದು ಸ್ಪಷ್ಟಪಡಿಸಿತು.

4. ರಾಮಜನ್ಮ ಭೂಮಿ ಟ್ರಸ್ಟ್ ನಿರ್ಮಿಸಲು ಆದೇಶ

ಮೂರು ತಿಂಗಳಲ್ಲಿ ಟ್ರಸ್ಟ್​ ನಿರ್ಮಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು. ಅಲ್ಲದೇ ಆ ಟ್ರಸ್ಟ್​ ಮೂಲಕವೇ ಮಂದಿರ ನಿರ್ಮಾಣದ ದೇಖರೇಕಿ ಹಾಗೂ ವಶ ಪಡಿಸಿಕೊಂಡ ಭೂಮಿ ಹಂಚಿಕೆಯನ್ನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

5. ಟ್ರಸ್ಟ್​ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರಾತಿನಿಧ್ಯ ನೀಡಲು ಸೂಚನೆ.

ವಿಶೇಷ ಅಂದರೆ ನಿರ್ಮೋಹಿ ಅಖಾಡದ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ನಿರ್ಮಿಸುವ ಮಂಡಳಿಯಲ್ಲಿ ನಿರ್ಮೋಹಿ ಅಖಾಡದ ಪ್ರಾತಿನಿಧ್ಯಕ್ಕೆ ಅವಕಾಶವನ್ನು ನೀಡಬೇಕು ಎಂದು ಕೂಡ ತಿಳಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ