92ನೇ ವರ್ಷಕ್ಕೆ ಕಾಲಿಟ್ಟ ಲಾಲ್‍ಕೃಷ್ಣ ಅಡ್ವಾಣಿ

ಬೆಂಗಳೂರು, ನ.8- ಭಾರತೀಯ ಜನತಾ ಪಕ್ಷದ ರಾಜಕೀಯ ಭೀಷ್ಮ ಎಂದೇ ಹೆಸರಾಗಿರುವ ಲಾಲ್‍ಕೃಷ್ಣ ಅಡ್ವಾಣಿಯವರು  92ನೇ  ವರ್ಷಕ್ಕೆ ಕಾಲಿಟ್ಟಿದ್ದಾರೆ.

ಲಾಲ್‍ಕೃಷ್ಣ ಅಡ್ವಾಣಿ ಯವರು ರಾಮ ಜನ್ಮಭೂಮಿ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿ ಹಲವು ರಥಯಾತ್ರೆಗಳ ಮೂಲಕ ವಿಶೇಷ ಸಂಚಲನ ಮೂಡಿಸಿದವರು.

ರಾಜನೀತಿಯಲ್ಲಿ ಮೌಲ್ಯಾಧಾರಿತ ಮಾರ್ಗದಲ್ಲಿ ನಡೆದು ಹಲವಾರು ಬದಲಾವಣೆಗಳನ್ನು ಸಾಕಾರಗೊಳಿಸಿ ಸಾರ್ಥಕ ರಾಜಕೀಯ ಜೀವನದಲ್ಲಿ ಪರಿಪಕ್ವತೆ ಕಂಡವರು. ನಿಶ್ವಾರ್ಥ ಜೀವನ ನಡೆಸಿ ಅಜಾತಶತ್ರುಗಳಾಗಿದ್ದಾರೆ.

ರಾಜಕೀಯ ಜೀವನದಲ್ಲಿ ಅತಿ ಎತ್ತರಕ್ಕೆ ಬೆಳೆದಿರುವ ಅಡ್ವಾಣಿಯವರಿಗೆ ಬೇರಾರೂ ಸಾಟಿಯಿಲ್ಲ. ದೇಶ ಕಂಡ ಅಪೂರ್ವ ರಾಜಕೀಯ ದಿಗ್ಗಜನಿಗೆ ಅನೇಕ ಗಣ್ಯರು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ