ಪಠ್ಯ ಪುಸ್ತಕಗಳಲ್ಲಿರುವ ಟಿಪ್ಪುವಿನ ತಪ್ಪು ಇತಿಹಾಸವನ್ನು ತೆಗೆದು ಹಾಕಬೇಕು-ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ

ಬೆಂಗಳೂರು, ನ.7- ಏಳನೆ ಮತ್ತು 10ನೆ ತರಗತಿಯ ಪಠ್ಯ ಪುಸ್ತಕಗಳಲ್ಲಿರುವ ಟಿಪ್ಪುವಿನ ತಪ್ಪು ಇತಿಹಾಸವನ್ನು ತೆಗೆದು ಹಾಕುವಂತೆ ಟಿಪ್ಪು  ಜಯಂತಿ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪಟಾಪಟ್ ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗದಲ್ಲಿನ ಉಚ್ಚಂಗಿ ಗುಡಿಯ ಮೇಲಿನ ಎರಡು ಅಂತಸ್ತುಗಳನ್ನು ಕೆಡವಿಸಿ ಆ ಕಲ್ಲುಗಳನ್ನು ಮಸೀದಿ ಕಟ್ಟಡಕ್ಕೆ ಉಯೋಗಿಸಲಾಗಿದೆ ಎಂದು ಆರೋಪಿಸಿದರು.

ಟಿಪ್ಪು ಕಾಲದಲ್ಲಿ ಮದಕರಿ ನಾಯಕನನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೆ ಕರೆದೊಯ್ಯಲಾಯಿತು ಹಾಗೂ ಚಿತ್ರದುರ್ಗದ ಖಜಾನೆಯಲ್ಲಿದ್ದ 64 ಲಕ್ಷ  ಬೆಳ್ಳಿ ನಾಣ್ಯ ಸೇರಿದಂತೆ ನಗ-ನಾಣ್ಯಗಳನ್ನು ಸಾಗಿಸಲಾಯಿತು. ಅಲ್ಲದೆ, 20 ಸಾವಿರ ಯುವ ನಾಯಕರನ್ನು ಕರೆದೊಯ್ದು ಮುಸ್ಲಿಮರನ್ನಾಗಿ ಮತಾಂತರಿಸಲಾಗಿದೆ.

ಇಂತವರನ್ನು ಒಳ್ಳೆಯವರೆಂಬಂತೆ  ಪುಸ್ತಕದಲ್ಲಿ ಬಿಂಬಿಸಲಾಗಿದೆ. ಅದರೆ, ಮಕ್ಕಳಿಗೆ ನೈಜ ಇತಿಹಾಸವನ್ನು ತಿಳಿಸಬೇಕು ಎಂದು ಹೇಳಿದರು.

ಪಠ್ಯ ಪುಸ್ತಕಗಳಲ್ಲಿರುವ ಟಿಪ್ಪುವಿನ ಇತಿಹಾಸವನ್ನು ಕೂಡಲೇ ತೆಗೆದು ಹಾಕಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ