ಸರ್ಕಾರ ರಚನೆಗಾಗಿ ತಮ್ಮ ಶಾಸಕರ ಖರೀದಿಗೆ ಮುಂದಾದ ಬಿಜೆಪಿ; ಶಿವಸೇನೆ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಗೆ ಡೆಡ್​ಲೈನ್​ ಹತ್ತಿರವಾಗುತ್ತಿದ್ದಂತೆ, ಬಿಜೆಪಿ ಸರ್ಕಾರ ರಚಿಸಲು ಶಾಸಕರ ಖರೀದಿಗೆ ಮುಂದಾಗಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ ಆರೋಪಿಸಿದ್ದಾರೆ.

ಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಪ್ರಕಟಿಸಿರುವ ಪಕ್ಷ, ಸರ್ಕಾರ ರಚನೆಗೆ ಹವಣಿಸುತ್ತಿರುವ ಬಿಜೆಪಿ, ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿದೆ. ಆದರೆ, ನಮ್ಮ ಶಾಸಕರು ಇದಕ್ಕೆಲ್ಲಾ ಮಾರು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದಿನ ವಿಧಾನಸಭೆ ಅವಧಿ ಇನ್ನೆರಡು ದಿನದಲ್ಲಿ ಮುಕ್ತಾಯವಾಗಲಿದ್ದು, ಮೂರು ದಿನದ ಅಧಿವೇಶನದಲ್ಲಿ ಹೊಸ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ರಚನೆಗೆ ಬಿಜೆಪಿ ನಡೆಸುತ್ತಿರುವ ಕಸರತ್ತು ‘ನೈತಿಕ ಭ್ರಷ್ಟಚಾರ’ ಮಾಡುತ್ತಿದೆ ಎಂದು ಕಾಂಗ್ರೆಸ್​  ಆರೋಪಿಸಿದೆ. ಶಿವಸೇನಾ ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಮೈತ್ರಿ ಮಾಡಿಕೊಂಡಿದೆ. ಆದರೆ, ತಮ್ಮ ಶಾಸಕ ಖರೀದಿ ನಡೆಯುತ್ತದೆಯಾ ಎಂಬ ಆತಂಕದಲ್ಲಿ ಶಿವಸೇನೆ ಇದೆ. ಇದರಿಂದಲೇ ತಿಳಿಯುತ್ತದೆ ಬಿಜೆಪಿ ನೈತಿಕವಾಗಿ ಎಷ್ಟು ಭ್ರಷ್ಟಾಚಾರಿಯಾಗಿದೆ ಎಂದು. ಇದೇ ಕಾರಣಕ್ಕಾಗಿ ನಾವು ಅವರಿಂದ ಮಹಾರಾಷ್ಟ್ರ ರಕ್ಷಿಸಬೇಕು. ಶಿವಸೇನೆ-ಬಿಜೆಪಿ ಮೈತ್ರಿ ನೈತಿಕ ಹಕ್ಕನ್ನು ಹೊಂದಿ ಸರ್ಕಾರ ರಚಿಸಲಿದೆಯೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್​ನ ನಾಯಕ ಸಚಿನ್​ ಸಾವಂತ್​ ಕೆಳಿದ್ದಾರೆ.

ಬಿಜೆಪಿ ನಾಯಕರು ರಾಜ್ಯಪಾಲ ಭಗತ್​ ಸಿಂಗ್​ ಕೊಶಯಾರಿ ಅವರನ್ನು ಭೇಟಿಯಾದ ಬಳಿಕ ಸೇನೆ ಶಾಸಕರ ಖರೀದಿ ಆರೋಪ ಮಾಡಿದೆ.

ಮುಖ್ಯಮಂತ್ರಿ ಪದವಿಯನ್ನು ಬಿಟ್ಟುಕೊಡಲು ಶಿವಸೇನೆ ಸಿದ್ಧವಿಲ್ಲ ಎಂಬುದನ್ನು ಕೂಡ ಸೇನೆ ನಾಯಕ ಸಂಜಯ್​ ರಾವತ್​ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ