ಅನರ್ಹ ಶಾಸಕರ ಭವಿಷ್ಯ ಇಂದು ನಿರ್ಧಾರ ? ಮುಳುವಾಗುತ್ತಾ ಆಡಿಯೊ ಬಾಂಬ್

ಹೊಸದಿಲ್ಲಿ: ಅನರ್ಹ ಶಾಸಕರ ಭವಿಷ್ಯಾ ಇಂದು ನಿರ್ಧಾರ ಆಗುವ ಸಾಧ್ಯತೆ ಇದ್ದು ಸುಪ್ರೀಮ್ ಕೋರ್ಟ್ ಇಂದೇ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

 

 

 

 

 

 

 

 

 

 

 

 

 

 

 

ಕಳೆದ ಕೆಲವು ದಿನಗಳ ಹಿಂದೆ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನ ನಡೆಸಿದ ಸುಪ್ರೀಮ್ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಆದರೆ ತೀರ್ಪು ಪ್ರಕಟಿಸುವ ಮುನ್ನವೇ ಸಿಎಮ್ ಯಡಿಯೂರಪ್ಪ ಅವರ ಆಡಿಯೊ ಬಾಂಬ್ ಪ್ರಕೆಣ ದೊಡ್ಡ ತಿರುವು ನೀಡಿತು.

ಬಿಎಸ್ ವೈ ಆಡಿಯೊವನ್ನ ಕಾಂಗ್ರಸ್ ಪರ ವಕೀಲ ಕಪಿಲ್  ಸಿಬಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದನ್ನ ನ್ಯಾಯಾಲಯ ಸಾಕ್ಷಿಯಾಗಿ ಪರಿಗಣಿಸಿತ್ತು. ಈ ಆಡಿಯೊ ಬಗ್ಗೆ ಪ್ರತ್ಯೇಕ ವಿಚಾರಣೆಯನ್ನ ನಡೆಸಬೇಕೆಂದು ಕಪಿಲ್ ಸಿಬಲ್ ಮನವಿಯನ್ನ ಮಾಡಿದ್ದರು. ಆಡಿಯೊ ವಿಚಾರಣೆ ಇಂದು ನಡೆಯುವ ಸಾಧ್ಯತೆ  ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ