ನಾಲ್ಕನೆ ದಿನಕ್ಕೆ ಕಾಲಿಟ್ಟ ಮಿಂಟೋ ವೈದ್ಯರ ಪ್ರತಿಭಟನೆ

ಬೆಂಗಳೂರು: ಮಿಂಟೋ ಆಸ್ಪತ್ರೆ ವೈದ್ಯರ ಜೊತೆ ಅನುಚಿತ ವರ್ತನೆ ಸಂಬಂಧ ಇಂದು ಕೂಡ ಚಿಕಿತ್ಸೆ ಸಿಗೋದು ಅನುಮಾನದಿಂದ ಕೂಡಿದೆ.

 

 

 

 

 

 

 

 

 

 

 

 

 

 

 

ಕರವೇ ಕಾರ್ಯಕರ್ತರು ಪದೇ ಪದೇ ಬಂದು ಹಲ್ಲೆ ಖಂಡಿಸಿರುವ ಮಿಂಟೋ ಆಸ್ಪತ್ರೆ ವೈದ್ಯರ ಪ್ರತಿಭಟನೆ  ನಾಲ್ಕನೆ ದಿನಕ್ಕೆ ಕಾಲಿಟ್ಟಿದ್ದು ಇಂದು ಕೂಡ ಚಿಕಿತ್ಸೆ ಸಿಗೋದು ಅನುಮಾನದಿಂದ ಕೂಡಿದೆ.

ಮೂರು ವಿಚಾರಗಳನ್ನ ಮುಂದಿಟ್ಟುಕೊಂಡು ವೈದ್ಯರು ಆಗ್ರಹಿಸಿದ್ದಾರೆ. ಹಲ್ಲೆ ಮಾಡಿದವರನ್ನ ಕೂಡಲೇ ಬಂಧಿಸಬೇಕು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ ಸುರಕ್ಷೆತೆ ಕೊಡಬೇಕು. ವೈದ್ಯರನ್ನ ರಕ್ಷಿಸಲು ನಿಯಮಗಳನ್ನ ಜಾರಿಗೆ ತರಬೇಕು  ಎಂದು ಪ್ರತಿಭಟನಾ ನಿರತ ವೈದ್ಯರು ಪಟ್ಟು ಹಿಡಿದ್ದಾರೆ.  ಇದಲ್ಲದೇ ಹಲ್ಲೆ ಮಾಡಿದ ಕಾರ್ಯಕರ್ತರನ್ನ ಯಾಕೆ ಇನ್ನು ಬಂಧಿಸಿಲ್ಲ ಎಂದು ವೈದ್ಯರು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ