ಡಿ.ಕೆ.ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ಪ್ರಕರಣ ನ.೭ಕ್ಕೆ

ನವದೆಹಲಿ, ನ ೪-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಧರ್ಮಪತ್ನಿ  ಉಷಾ  ಹಾಗೂ ತಾಯಿ ಗೌರಮ್ಮ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್ ನ.೭ಕ್ಕೆ ಮುಂದೂಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ  ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯ ಮುಂದುವರೆದ ವಿಚಾರಣೆಗಾಗಿ ಅವರ ತಾಯಿ ಮತ್ತು ಧರ್ಮಪತ್ನಿಗೆ ನೋಟಿಸ್ ನೀಡಿತ್ತಲ್ಲದೆ, ವಿಚಾರಣೆಗಾಗಿ ದೆಹಲಿಗೆ ಬರುವಂತೆ ಸೂಚಿಸಿತ್ತು.

ಇಡಿ ನೋಟೀಸನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋದ ಡಿ.ಕೆ.ಶಿವಕುಮಾರ್ ಕುಟುಂಬ ಗೌರಮ್ಮ ಅವರಿಗೆ ವಯಸ್ಸಾಗಿದೆ. ಹಿರಿಯರಾದ ಅವರನ್ನು ದೆಹಲಿಗೆ ವಿಚಾರಣೆಗೆ ಕರೆಯುವುದು ಸೂಕ್ತವಲ್ಲ. ಬೆಂಗಳೂರಿನಲ್ಲೇ ವಿಚಾರಣೆ ನಡೆಸಿದರೆ ಗೌರಮ್ಮ ಮತ್ತು  ಉಷಾ ಇಬ್ಬರೂ ಕೂಡ ಹಾಜರಾಗುತ್ತಾರೆ ಎಂದು ಒತ್ತಾಯಿಸಿತು.

ಈವರೆಗೂ ಮೂರು ಬಾರಿ ವಿಚಾರಣೆ ನಡೆಸಿ , ಮೂರು ಬಾರಿ ಪ್ರಕರಣವನ್ನು ಮುಂದೂಡಲಾಗಿದೆ. ಅ.೩೦ ರಂದು ಮೊದಲ ಹಂತದ ವಿಚಾರಣೆ ನಡೆದು ನ.೪ಕ್ಕೆ ಮುಂದೂಡಿಕೆಯಾಗಿತ್ತು.

ಇಂದು ಮತ್ತೊಮ್ಮೆ ವಿಚಾರಣೆ ಮುಂದೂಡಿಕೆಯಾಗಿದ್ದು, ಮುಂದಿನ ದಿನಾಂಕವನ್ನು ನ.೭ಕ್ಕೆ ನಿಗದಿ ಮಾಡಲಾಗಿದೆ. ಈ ನಡುವೆ ಜಾರಿ ನಿರ್ದೇಶನಾಲಯ ಗೌರಮ್ಮ ಹಾಗೂ ಉಷಾ ಅವರಿಗೆ   ನೋಟೀಸ್ ನೀಡಿದ್ದು, ನ.೮ ರಂದು ವಿಚಾರಣೆಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದೆ. ಹಿಂದಿನ ದಿನ ಹೈಕೋರ್ಟ್ ನೀಡುವ ತೀರ್ಪು ಮಹತ್ವ ಪಡೆದುಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ